`ಶಿಕ್ಷಣಕ್ಕೆ ಮಹತ್ವ ನೀಡಿದ ಕ್ರೈಸ್ತ ಸಮುದಾಯ'

7

`ಶಿಕ್ಷಣಕ್ಕೆ ಮಹತ್ವ ನೀಡಿದ ಕ್ರೈಸ್ತ ಸಮುದಾಯ'

Published:
Updated:

ಕೊಳ್ಳೇಗಾಲ: `ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸುವಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪರಿಶ್ರಮ ಅಭಿನಂದನೀಯ' ಎಂದು ಶಾಸಕ ಆರ್.ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಸಂತ ಫ್ರಾನ್ಸಿಸ್ ಅಸ್ಸಿಸಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ನೂತನ ಕಟ್ಟಡ ಉದ್ಘಾಟನೆಯಲ್ಲಿ ಮಾತನಾಡಿದರು.ಮಾರ್ಟಳ್ಳಿ ವ್ಯಾಪ್ತಿಯ 6 ಗ್ರಾಮಗಳಲ್ಲಿ ಮಿಷನರಿ ಶಿಕ್ಷಣದ ಫಲವಾಗಿ 150 ಹೆಚ್ಚು ಫಾದರ್‌ಗಳು, 600ಕ್ಕೂ ಹೆಚ್ಚು ಸಿಸ್ಟರ್‌ಗಳು ಹಾಗೂ 2ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು ಉದ್ಯೋಗ ಪಡೆದಿದ್ದಾರೆ ಎಂದು ವಿವರಿಸಿದರು. ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ ಕ್ರೈಸ್ತ ಮಿಷನರಿ ಶಿಕ್ಷಣ ಸಂಸ್ಥೆ ಕೇವಲ ಅಂಕಗಳಿಕೆಗೆ ಒತ್ತುನೀಡದೆ ಜೀವನದ ಮೌಲ್ಯ ಮತ್ತು ಶಿಸ್ತನ್ನು ವಿದ್ಯಾರ್ಥಿ ಗಳಲ್ಲಿ ರೂಪಿಸುತ್ತದೆ ಎಂದರು.ಅಧ್ಯಕ್ಷತೆಯನ್ನು ಮೈಸೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಥಾಮಸ್ ಆಂತೋನಿ ವಾಳಪಿಳೈ ವಹಿಸಿ ಮಾತನಾಡಿದರು.

ಜಿಲ್ಲಾ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಸಿದ್ದದೇವರು, ನಗರಸಭಾ ಸದಸ್ಯ ಜಿ.ಸೆಲ್ವರಾಜ್, ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ಮೇರಿಯನ್ ಪಿಂಟೋ, ಪ್ರಾಂಶುಪಾಲ ಆಲ್ಬರ್ಟ್ ಪಿಂಟೋ, ಮುಖ್ಯೋಪಾಧ್ಯಾಯ ಲಿಯೋ ಮೈಕಲ್, ಅನ್ನಾಸಭಾಸ್ಟಿನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry