ಸೋಮವಾರ, ಜನವರಿ 27, 2020
27 °C

ಶಿಕ್ಷಣಕ್ಕೆ ಸಕಲ ಸೌಲಭ್ಯ: ಸಚಿವ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಗ್ರಾಮೀಣ ಪ್ರದೇಶದಲ್ಲೂ ಶಿಕ್ಷಣ ನೀಡಲು ಖಾಸಗಿ ಶಿಕ್ಷಣ ಸಂಸ್ಥೆ ಗಳು ಮುಂದೆ ಬಂದಿವೆ. ಸರ್ಕಾರಿ ಶಾಲೆ ಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಮಕ್ಕಳನ್ನು ಸ್ಪರ್ಧಾತ್ಮಕವಾಗಿ ತಯಾರು ಮಾಡಲು ಶಿಕ್ಷಕರು ಮುಂದಾಗಬೇಕು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸಲಹೆ ನೀಡಿದರು.ತಾಲ್ಲೂಕಿನ ಬರಟಗಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ಮಂಗಳ ವಾರ ಭೂಮಿ ಪೂಜೆ ನೆರವೇರಿಸಿ  ಮಾತನಾಡಿದರು. 2020ರ ಹೊತ್ತಿಗೆ ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂಬ ಸದುದ್ದೇಶದಿಂದ ಕೇಂದ್ರದ ಯು. ಪಿ.ಎ ಸರ್ಕಾರ ಮಾಧ್ಯಮಿಕ ಶಿಕ್ಷಣ ಅಭಿ ಯಾನ ಆರಂಭಿಸಿದ್ದು, ಕಟ್ಟಕಡೆಯ ಗ್ರಾಮದಲ್ಲಿಯೂ ಶಿಕ್ಷಣಕ್ಕೆ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.ಬರಟಗಿ ಗ್ರಾಮದ ಬಹುದಿನಗಳ ಬೇಡಿಕೆಯಾದ ಸೇತುವೆ ನಿರ್ಮಾಣ, ಕೆರೆ ತುಂಬಿಸುವುದು ಹಾಗೂ ಮುಳ ವಾಡ ಏತ ನೀರಾವರಿ ಯೋಜನೆ ಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾ ಗುವುದು ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಸಿದ್ದಣ್ಣ ಸಕ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಂಗಮೇಶ ದಾಶ್ಯಾಳ, ಶಶಿಗೌಡ ಪಾಟೀಲ, ರಾಮುಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.ಭೂಮಾಪನ: ಭೂಮಿಯ ಮೇಲ್ಮೈ ಬದಲಾವಣೆಯಾಗುತ್ತಾ ಇರುತ್ತದೆ. ಈ ಬದಲಾವಣೆಗೆ ಅನುಸಾರವಾಗಿ ಸರ್ಕಾರದಿಂದ ಮರು ಭೂಮಾಪನ ಕಾರ್ಯವನ್ನು ಹಮ್ಮಿಕೊಂಡಿದ್ದು, ಗ್ರಾಮಸ್ಥರು ಭೂಮಾಪನಾ ಕಾರ್ಯಕ್ಕೆ ಸಹಕರಿಸುವಂತೆ ವಿಜಾಪುರ ಉಪವಿಭಾ ಗಾಧಿಕಾರಿ ಡಾ. ಬೂದೆಪ್ಪ ಮನವಿ ಮಾಡಿದರು. ತಾಲ್ಲೂಕಿನ ಇಂಗನಾಳ ಗ್ರಾಮದಲ್ಲಿ ಜರುಗಿದ ಭೂಮಾಪನ ಕಾರ್ಯದ ಗ್ರಾಮ ಸಭೆಯಲ್ಲಿ ಮಾತ ನಾಡಿದ ಅವರು, ಭೂಮಾಪನದ ಜೊತೆಗೆ ಪಹಣಿ ಪತ್ರಿಕೆಗಳ ತಿದ್ದುಪಡಿ, ವಾರಸಾ, ಭೋಜಾ ದಾಖಲೆಗಳನ್ನು ಸರಿಪಡಿಸಲಾಗುವುದು ಎಂದರು.ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಜಗದೀಶ ಆರ್. ರೂಗಿ, ವಿಜಾಪುರ ತಾಲ್ಲೂಕಿನ ಇಂಗ ನಾಳ ಮತ್ತು ಮುದ್ದೇಬಿಹಾಳ ತಾಲ್ಲೂ ಕಿನ ಬೂದಿಹಾಳ ಪಿ.ಎನ್.ಗ್ರಾಮಗಳ ಮರು ಭೂಮಾಪನ ಕಾರ್ಯ ಕೈಗೊ ಳ್ಳುವ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.ಇಂಗನಾಳ ಗ್ರಾಮದಲ್ಲಿ ಸರ್ಕಾರದಿಂದ ಉಚಿತವಾಗಿ ಗ್ರಾಮದ ಎಲ್ಲ ಜಮೀನುಗಳ ಅಳತೆ ಕಾರ್ಯ ಕೈಗೊಳ್ಳಲಾಗುವುದು. ಇದಕ್ಕಾಗಿ ಯಾರೂ ಅರ್ಜಿ ಸಲ್ಲಿಸಬೇಕಾಗಿಲ್ಲ. ಸಮೀಕ್ಷೆಗೆ ಹಣ ನೀಡಬೇಕಾಗಿಲ್ಲ ಎಂದರು. ಗ್ರಾಮ ಸಭೆಯಲ್ಲಿ ವಿಜಾಪುರ ತಹಶೀಲ್ದಾರ ಜಿ.ಆರ್.ಶೀಲವಂತರ ಇತರರು ಇದ್ದರು.

ಪ್ರತಿಕ್ರಿಯಿಸಿ (+)