ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ಧಿ: ಎಂ. ಮಲ್ಲಣ್ಣ

7

ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ಧಿ: ಎಂ. ಮಲ್ಲಣ್ಣ

Published:
Updated:

ಚಿತ್ರದುರ್ಗ: ಶಿಕ್ಷಣ ಪಡೆಯುವ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಡಯಟ್ ಪ್ರಾಂಶುಪಾಲ ಎಂ. ಮಲ್ಲಣ್ಣ ಹೇಳಿದರು.ನಗರದ ಲಕ್ಷ್ಮೀನರಸಿಂಹಸ್ವಾಮಿ ಡಿ.ಇಡಿ. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 2011-12ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲ ಎಚ್.ಎಂ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ಎಚ್. ಮೋಹನ್, ಡಯಟ್ ಉಪ ಪ್ರಾಂಶುಪಾಲ ರಾಮಾಂಜನೇಯ, ಮುಖ್ಯಶಿಕ್ಷಕ ಆರ್. ವಿಜಯಕುಮಾರ್ ಮತ್ತಿತರರು ಹಾಜರಿದ್ದರು.ಅರ್ಪಿತಾ ಪ್ರಾರ್ಥಿಸಿದರು. ಎನ್. ಮಂಜುನಾಥ್ ಸ್ವಾಗತಿಸಿದರು. ಮಂಜುಶ್ರೀ ಮತ್ತು ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.ಎನ್‌ಎಸ್‌ಎಸ್ ಶಿಬಿರ

ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಪೂರಕವಾಗಿವೆ ಎಂದು ಜಿ.ಪಂ. ಸದಸ್ಯ ಡಿ. ರಮೇಶ್ ಅಭಿಪ್ರಾಯಪಟ್ಟರು.ಈಚೆಗೆ ತಾಲ್ಲೂಕಿನ ಇಂಗಾಳದಾಳ್ ಗ್ರಾಮದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಅವರು ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲ ಜೆ. ಯಾದವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಗ್ರಾ.ಪಂ. ಸದಸ್ಯರಾದ ಎಂ.ಎಚ್. ರಾಘವೇಂದ್ರ, ಲಕ್ಷ್ಮಕ್ಕ, ಬಸಮ್ಮ, ನಾಗರಾಜು, ಯೋಜನಾಧಿಕಾರಿ ಎಸ್. ಹನುಮಂತಪ್ಪ, ಪ್ರಾಂಶುಪಾಲ ನಾಗರಾಜ್, ಉಪನ್ಯಾಸಕರಾದ ದೊಡ್ಡಪ್ಪ, ಭೀಮಾರೆಡ್ಡಿ, ಕಾರ್ಯದರ್ಶಿ ಶಿವಕುಮಾರ್  ಹಾಜರಿದ್ದರು. ಮಾರುತಿ ಕಾರ್ಯಕ್ರಮ ನಿರೂಪಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗುರುರಾಜ್ 

ಚಿತ್ರದುರ್ಗ:  ನಗರಾಭಿವೃದ್ಧಿ  ಪ್ರಾಧಿಕಾರದ  ಅಧ್ಯಕ್ಷರನ್ನಾಗಿ  ಎಂ.ಪಿ. ಗುರುರಾಜ್  ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ನಗರದ ನಿವಾಸಿಯಾದ ಗುರುರಾಜ್ ಬಿಜೆಪಿ ಹಿರಿಯ ಕಾರ್ಯಕರ್ತರಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು.

ಸುಮಾರು ಮೂರುವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry