ಸೋಮವಾರ, ಜನವರಿ 27, 2020
16 °C

ಶಿಕ್ಷಣದಿಂದ ಸಮಗ್ರ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸರ್ವಶಿಕ್ಷಣ ಅಭಿಯಾನವು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಗುಲ್ಬರ್ಗ   ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ ಹೇಳಿದರು.ಅವರು ಮಂಗಳವಾರ ಮಹಾಂಗಾವ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಭಾರತ ಸರಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅನುಪಮಾ ಅಭ್ಯುದಯ ಸಂಸ್ಥೆ, ಕಿರಣ ರೂರಲ್ ರಿಕನ್ಸ್‌ಟ್ರಕ್ಷನ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಸರ್ವ ಶಿಕ್ಷಣ ಅಭಿಯಾನ~ ಕುರಿತು ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಗೋಳಿಸುವ ಪ್ರಚಲಿತ ಸರ್ವ ಶಿಕ್ಷಾ ಅಭಿಯಾನ ಕಾರ್ಯಕ್ರಮ ಬಲಗೊಳಿಸಲು ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಮಾತ್ರ ಸಾಧ್ಯ ಎಂದು ಅವರು ಹೇಳಿದರು.ಉತ್ತರ ವಲಯ ಕೇತ್ರ ಶಿಕ್ಷಣಾಧಿಕಾರಿ ದತ್ತಪ್ಪ ತಳವಾರ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ 3,400 ವಲಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಆರಂಭಿಸಲಾಗಿದೆ. 9.5 ಲ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಶಿಕ್ಷಣ ಖಾತರಿ ಯೋಜನೆ ಪರ್ಯಾಯ ಮತ್ತು ನವೀನ ಪದ್ಧತಿಯ (ಎ.ಐ.ಇ.) ಶಿಕ್ಷಣ ಕೇಂದ್ರಗಳಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ ಸುಮಾರು 11.5 ಕೋಟಿ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರುಕೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಶಿಕ್ಷಣ ಸಂಯೋಜಕ ಚಂದ್ರಶೇಖರ ಎಸ್ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆಂಬಣ್ಣಾ ಆರ್.ಜಮಾದಾರ ವಹಿಸಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಶಿವಶರಣಪ್ಪ ಕಿಣಗಿ ಪ್ರಾಸ್ತಾವಿಕ ಮಾತನಾಡಿದರು. ಕಿರಣ ರೂರಲ್ ರಿಕನ್ಸ್‌ಟ್ರಕ್ಷನ್ ಸೊಸೈಟಿಯ ಕಾರ್ಯದರ್ಶಿ ಎಂ.ಎಂ.ಶಿರಹಟ್ಟಿ ವಂದಿಸಿದರು.   ಮಹಾಂಗಾವ ಗ್ರಾಪಂ ಅಧ್ಯಕ್ಷೆ ಗಿರಿಜಾಬಾಯಿ, ಪ್ರಾಚಾರ್ಯ ವಿಜಯಕುಮಾರ ಹುಲಿ, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಹೆಬ್ಬಾಳ, ಅನುಪಮಾ ಅಭ್ಯುದಯ ಸಂಸ್ಥೆಯ ಸಂಯೋಜಕ ಸಿ.ಎನ್.ಬಾಬಳಗಾಂವ ಹಾಗೂ ಎಸ್.ಸಿ.ಬಮನಾಳಕರ ಉಪಸ್ಥಿತರಿದ್ದರು. ಭಾಷಣ ಸ್ಪರ್ಧೆಯಲಿ ್ಲವಿಜೆತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)