ಗುರುವಾರ , ಮೇ 26, 2022
32 °C

ಶಿಕ್ಷಣದ ಜತೆ ಆರೋಗ್ಯವೂ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಿಗಳಲೆ(ನರಸಿಂಹರಾಜಪುರ): ಆರ್ಥಿಕ ಮತ್ತು ಶೈಕ್ಷಣಿಕ  ಸದೃಢತೆ ಜತೆಗೆ ಆರೋಗ್ಯಕ್ಕೆ ಆದ್ಯತೆ ನೀಡಿದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಜೆ.ಅಂಟೋನಿ ತಿಳಿಸಿದರು.ತಾಲ್ಲೂಕಿನ ಶಿರಗಳಲೆ ಗ್ರಾಮದಲ್ಲಿ ಜಲಸಂವರ್ಧನ ಯೋಜನೆ, ಜಿಲ್ಲಾ ಮಾರ್ಗದರ್ಶನ ತಂಡ,ಶ್ರೀ ದುರ್ಗಾ ಕೆರೆ ಬಳಕೆದಾರರ ಸಂಘ, ಮಾರ್ಗದರ್ಶಿ ಮತ್ತು  ದುರ್ಗಾದರ್ಶಿಸಂಘ ಹಾಗೂ ಕೊಪ್ಪದ ಎ.ಎಲ್.ಎನ್.ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಆಶ್ರಯದಲ್ಲಿ ಶುಕ್ರವಾರ ನಡೆದ ಉಚಿತ ಆಯುರ್ವೇದ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಎಲ್ಲರೂ ಹೆಚ್ಚಿನ ಹಣಗಳಿಸುವ ಕಡೆ ಗಮನ ಹರಿಸುತ್ತಿದ್ದು, ಆರೋಗ್ಯದ ಕಡೆ ನಿರ್ಲಕ್ಷ್ಯವಹಿಸಿದ್ದಾರೆ.ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವ ಬಗ್ಗೆ ಹಾಗೂ ಆಹಾರ ಸೇವನೆಯ ಅರಿವಿಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಔಷಧಿಗಳಲ್ಲಿ ರೋಗ ಸಂಪೂರ್ಣ ಗುಣ ಪಡಿಸುವ ಶಕ್ತಿ ಇಲ್ಲವಾಗಿದೆ.ಆದರೆ ಭಾರತದ ಸಂಸ್ಕೃತಿಯ ಭಾಗ ವಾಗಿರುವ ಆಯುರ್ವೇದದಲ್ಲಿ ರೋಗಗಳನ್ನು ಸಂಪೂರ್ಣ ಗುಣಪಡಿಸುವ ಶಕ್ತಿ ಇದೆ ಎಂದು ಹೇಳಿದರು.ಕೊಪ್ಪ ಆಯುರ್ವೇದ ಕಾಲೇಜಿನ ವೈದ್ಯ ಡಾ.ಅಶೋಕ್ ಹಾವಳದ ಮಾತನಾಡಿ, ಎಲ್ಲರಿಗೂ ಉತ್ತಮ ಆಹಾರ, ಶಿಕ್ಷಣ, ಆರೋಗ್ಯ ಲಭ್ಯವಾದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಾಗುತ್ತದೆ. ಆರೋಗ್ಯವೇ ಸಂಪತ್ತಾಗಿದೆ. ಉತ್ತಮ ಜೀವನ ಶೈಲಿ ಅಳವಡಿಸಿಕೊಂಡರೆ ಆರೋಗ್ಯ ವೃದ್ಧಿ ಜೊತೆಗೆ ಹಣ ಉಳಿತಾಯವಾಗುತ್ತದೆ ಎಂದರು.ಜಲ ಸಂವರ್ಧನೆ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಸುಂದರ್‌ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರ ನೀರಾವರಿ ಇಲಾಖೆಯ ಮೂಲಕ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಎಲ್ಲರಿಗೂ ಉತ್ತಮ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಿದೆ.ಜಲ ಸಂವರ್ಧನಾ ಯೋಜ ೆಯಡಿ ತಾಲ್ಲೂಕಿನ 10 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರ ಜೊತೆಗೆ ಗ್ರಾಮೀಣ ಭಾಗದ ಜನರ ಆರೋಗ್ಯ ಅಭಿವೃದ್ಧಿ ಪಡಿಸಲು ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳೆ ಗ್ರಾಮ ಪಂಚಾಯಿತಿ ಸದಸ್ಯ ಸಜಿ ವಹಿಸಿ ಮಾತನಾಡಿದರು.

ಕೊಪ್ಪ ಆಯುರ್ವೇದ ಕಾಲೇಜಿನ ವೈದ್ಯೆ ಡಾ.ಬಿ.ಕೆ.ಶೋಭಾ, ಶ್ರೀ ದುರ್ಗಾ ಕೆರೆ ಬಳಕೆದಾರರ ಉಪ ಸಮಿತಿಯ ಕಾರ್ಯದರ್ಶಿ ಶ್ಯಾಮಯ್ಯ, ಖಜಾಂಚಿ ಉಪೇಂದ್ರ, ಸದಸ್ಯೆ ಲತಾ ರವಿ,ಶ್ರೀ ದುರ್ಗಾದರ್ಶಿ ಸ್ತ್ರೀಶಕ್ತಿ ಸಂಘದ ಲೀಲಾ ಪರಮೇಶ್ವರ್, ಮಾರ್ಗದರ್ಶಿ ಸ್ತ್ರೀಶಕ್ತಿ ಸಂಘದ ಸುಮಿತ್ರ ಜಯರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್.ಶಿವದಾಸ್,ಲಿಟ್ಟಿ, ಶೈನಿಜೋಸ್, ಉಪಾ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.