ಶಿಕ್ಷಣದ ಜೊತೆ ರಾಜಕೀಯದ ಅನುಭವ ಗಳಿಸಿ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಶಿಕ್ಷಣದ ಜೊತೆ ರಾಜಕೀಯದ ಅನುಭವ ಗಳಿಸಿ

Published:
Updated:

ಹಿರೇಕೆರೂರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಯಲ್ಲಿಯೇ ರಾಜಕೀಯದ ಅನುಭವವನ್ನು ಗಳಿಸಿ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಹಾಗೂ ಭವಿಷ್ಯ ದಲ್ಲಿ ಉತ್ತಮ ಆಡಳಿತಗಾರರಾಗಲು ಶಾಲಾ ಸಂಸತ್ತು ಸಹಕಾರಿ ಎಂದು ಹಂಸಭಾವಿ ಮಹಾಂತ ಸ್ವಾಮಿ ಕಾಲೇಜಿನ ಪ್ರಾಧ್ಯಾಪಕ ಧೀರೇಂದ್ರ ಏಕಬೋಟೆ ಹೇಳಿದರು.ಹಂಸಭಾವಿ ಗ್ರಾಮದಲ್ಲಿ ಮೃತ್ಯುಂಜಯ ವಿದ್ಯಾ ಪೀಠದ ದುರ್ಗದ ಪ್ರೌಢಶಾಲೆಯಲ್ಲಿ ಶನಿವಾರ ಶಾಲಾ ಸಂಸತ್ತು ಉದ್ಘಾಟಿಸಿ  ಮಾತನಾಡಿದರು. ಮೃತ್ಯುಂಜಯ ವಿದ್ಯಾ ಪೀಠದ ಕಾರ್ಯಾಧ್ಯಕ್ಷ ಪಿ.ವಿ.ಕೆರೂಡಿ ಅಧ್ಯಕ್ಷತೆ ವಹಿಸಿದ್ದರು.  ಆಡಳಿತ ಮಂಡಳಿಯ ಎನ್.ಸಿ.ಅಕ್ಕಿ, ಲಿಂಗರಾಜ ಎಲಿ, ಎಸ್.ವಿ.ಪಾಟೀಲ, ಪ್ರಭಣ್ಣ ಬಳಗಾನೂರ  ಉಪಸ್ಥಿತರಿದ್ದರು.ನಿವೃತ್ತಿ ಹೊಂದಿದ ಶಿಕ್ಷಕ ಎಚ್. ಎಂ.ಅಂಗಡಿ ಅವರನ್ನು ಸನ್ಮಾನಿಸಲಾಯಿತು.  ಮುಖ್ಯ ಶಿಕ್ಷಕ ಜಿ. ಆರ್.ಕೆಂಚಕ್ಕನವರ ಸ್ವಾಗತಿಸಿ, ಪ್ರಾಸ್ತಾವಿಕ ಮಾತ ನಾಡಿದರು. ದಯಾನಂದ  ಮತ್ತು ವಿ.ಸಿ. ಕೋರಿ ನಿರೂಪಿಸಿದರು.  ಬಣಕಾರ ವಂದಿಸಿದರು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry