ಶಿಕ್ಷಣ, ಆದಾಯ ಸಮಾಜ ಪ್ರಗತಿಯ ತಳಹದಿ

ಬುಧವಾರ, ಜೂಲೈ 17, 2019
23 °C

ಶಿಕ್ಷಣ, ಆದಾಯ ಸಮಾಜ ಪ್ರಗತಿಯ ತಳಹದಿ

Published:
Updated:

ಅರೆಹೊಳೆ (ಬೈಂದೂರು): ವ್ಯಕ್ತಿ ಮತ್ತು ಸಮಾಜದ ಪ್ರಗತಿಗೆ ಶಿಕ್ಷಣ ಮತ್ತು ಆದಾಯ ತಳಹದಿಯಾಗಿ ರುವುದರಿಂದ ಅದನ್ನು ಸಂಸ್ಥೆಗಳು ಆದ್ಯತೆಯ ಮೇಲೆ ಒದಗಿಸಬೇಕು ಎಂದು ಮುಂಬೈನ ವಾಸ್ತುಶಾಸ್ತ್ರ ಪಂಡಿತ ನವೀನಚಂದ್ರ ಸನಿಲ್ ಹೇಳಿದರು. 



 ನಾವುಂದದ ಅರೆಹೊಳೆಯಲ್ಲಿ ಸ್ಥಾಪನೆಯಾದ ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ದುಡಿಮೆಯ ಒಂದಂಶವನ್ನು ಶಿಕ್ಷಣ ಸಂಸ್ಥೆ ನಡೆಸಲು ವೆಚ್ಚಮಾಡುತ್ತಿರುವ ಎನ್. ಕೆ.ಬಿಲ್ಲವ ಈ ಸಹಕಾರಿಯನ್ನು ಹುಟ್ಟುಹಾಕುವ ಮೂಲಕ ಹುಟ್ಟೂರಿನ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದಂತಾಗಿದೆ ಎಂದರು. 



 ಸಹಕಾರಿಯ ಅಧ್ಯಕ್ಷ ಎನ್.ಕೆ.ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ರಾಜು ಪೂಜಾರಿ ಭದ್ರತಾ ಕೊಠಡಿಯನ್ನು, ವಕೀಲ ರವಿಕಿರಣ ಮುರ್ಡೇಶ್ವರ ಗಣಕೀಕರಣವನ್ನು ಉದ್ಘಾಟಿಸಿದರು.



ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಶೇರುಪತ್ರವನ್ನು, ಅರೆಹೊಳೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಠೇವಣಿಪತ್ರವನ್ನು ಬಿಡುಗಡೆ ಮಾಡಿದರು.



 ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕ ಭಾಸ್ಕರ ಕಾಮತ್, ಗಂಗೊಳ್ಳಿಯ ಪಂಚಗಂಗಾವಳಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ರಾಜು ದೇವಾಡಿಗ, ಅರೆಹೊಳೆ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಮಾಧವ ಮಂಜ, ಶುಭದಾ ಶೈಕ್ಷಣಿಕ ಸಂಸ್ಥೆಯ ಟ್ರಸ್ಟಿ ಎ.ಭಾಸ್ಕರ ಹೆಬ್ಬಾರ್ ಶುಭ ಹಾರೈಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಪುಂಡಲೀಕ ನಾಯಕ್ ಸ್ವಾಗತಿಸಿದರು. ಶಿಕ್ಷಕ ಕೆ.ಶಶಿಧರ ಶೆಟ್ಟಿ ನಿರೂಪಿಸಿದರು.



ಉಪಾಧ್ಯಕ್ಷ ಎಚ್.ಬಿ.ತೇಜಪ್ಪ ಶೆಟ್ಟಿ, ನಿರ್ದೇಶಕರಾದ ವಿಶ್ವನಾಥ ಕೆ.ಕೋಟ್ಯಾನ್, ಬಿ.ಎ. ರಝಾಕ್, ಎ.ಸತೀಶ, ಮಂಜು ಕೆ. ಪೂಜಾರಿ, ಪ್ರಮೋದ ಪೂಜಾರಿ, ರಾಮಕೃಷ್ಣ ಕೆ. ಬಿಲ್ಲವ ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry