ಶಿಕ್ಷಣ ಕಾಳಜಿ ಇಲ್ಲದವರಿಂದ ಸಮ್ಮೇಳನ-ಆರೋಪ

7

ಶಿಕ್ಷಣ ಕಾಳಜಿ ಇಲ್ಲದವರಿಂದ ಸಮ್ಮೇಳನ-ಆರೋಪ

Published:
Updated:

ಮಡಿಕೇರಿ: ಶೈಕ್ಷಣಿಕ ಕಾಳಜಿ ಇಲ್ಲದ ಉಪನ್ಯಾಸಕರಿಂದ ಶೈಕ್ಷಣಿಕ ಸಮ್ಮೇಳನ ನಡೆಯುತ್ತಿರುವುದು ಹಾಸ್ಯಾಸ್ಪದ ಎಂದು ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ನೌಕರರ ಸಂಘದ ಪದಾಧಿಕಾರಿಗಳು ವ್ಯಂಗ್ಯವಾಡಿದರು.ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಮಹದೇವಸ್ವಾಮಿ ಅವರು, ಅ.5ರಂದು ಶೈಕ್ಷಣಿಕ ಸಮ್ಮೇಳನ ಆಯೋಜಿಸಲು ಮುಂದಾ ಗಿರುವ ಕೆಲವು ಉಪನ್ಯಾಸಕರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇದರ ದಾಖಲಾತಿಗಳು ನಮ್ಮ ಬಳಿ ಇವೆ ಎಂದರು.ಸಮ್ಮೇಳನ ಆಯೋಜಿಸಲು ಮುಂದಾಗಿರುವ ಸಂಘದ ಉಪನ್ಯಾಸಕ ರೊಬ್ಬರು ತಮ್ಮ ಜನ್ಮದಿನಾಂಕದ ಬಗ್ಗೆ ಕಳೆದ 35 ವರ್ಷಗಳಿಂದ ಮರೆಮಾ ಚುತ್ತಿದ್ದಾರೆ. ಜನ್ಮದಿನಾಂಕದ ದಾಖಲಾತಿಗಾಗಿ ಮೂಲ ಅಂಕಪಟ್ಟಿ ಯನ್ನು ನೀಡದೇ ಮರೆಮಾ ಚುತ್ತಿದ್ದಾರೆ. ಇವರ ಬಗ್ಗೆ ಲೋಕಾ ಯುಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಸಂಘದ ಮತ್ತೊಬ್ಬ ಪದಾಧಿಕಾರಿ ಉಪನ್ಯಾಸರೊಬ್ಬರ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಇನ್ನೊಬ್ಬ ಉಪನ್ಯಾಸಕರು ನಿಯೋಜನೆ ಮಾಡಲಾದ ಕಾಲೇಜಿಗೆ ತೆರಳದೇ ರಾಜಕೀಯ ಕೃಪಾಕಟಾಕ್ಷದಿಂದ ರದ್ದು ಪಡಿಸಿಕೊಂಡಿದ್ದಾರೆ. ಇಂತಹ ಉಪನ್ಯಾಸಕರು ಆಯೋಜಿಸುವ ಸಮ್ಮೇಳನದಿಂದ ಯಾರಿಗೆ ಯಾವ ಪ್ರಯೋಜನ ದಕ್ಕಲಿದೆ ಎಂದು ಅವರು ಪ್ರಶ್ನಿಸಿದರು.ಕೇವಲ 26 ಕಾಲೇಜುಗಳ ಉಪನ್ಯಾಸಕರ ಸದಸ್ಯತ್ವವನ್ನು ಹೊಂದಿ ರುವ ಈ ಸಂಘವು 57 ಕಾಲೇಜುಗಳ ಉಪನ್ಯಾಸಕರನ್ನು ಹೊಂದಿದ್ದೇವೆ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಶೈಕ್ಷಣಿಕ ಸಮ್ಮೇಳನವು ರಾಜಕೀಯ ಓಲೈಕೆಗಾಗಿ ಮಾಡಲಾ ಗುತ್ತಿದೆ ಎನ್ನುವುದನ್ನು ಅರಿತಿರುವ ಮುಖ್ಯ ಅತಿಥಿಗಳು ಸಮ್ಮೇಳನಕ್ಕೆ ಬಾರದಿರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.ಪ್ರಾಂಶುಪಾಲರ ಸಂಘದ ಸದಸ್ಯ ಶನಿವಾರಸಂತೆ ಕಾಲೇಜಿನ ದೇವರಾಜ್ ಮಾತನಾಡಿ, ಈ ಸಮ್ಮೇಳನದ ಬಗ್ಗೆ ಪ್ರಾಂಶುಪಾಲರ ಸಂಘದಲ್ಲಿ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ಆದರೂ ಈ ಸಮ್ಮೇಳನಕ್ಕೆ ನಮ್ಮ ಸಂಘ ಬೆಂಬಲ ನೀಡಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಷ್ಟೊಂದು ಗೊಂದಲಕ್ಕೆ ಕಾರಣವಾಗಿರುವ ಈ ಸಮ್ಮೇಳನವನ್ನು ರದ್ದುಪಡಿಸಿ, ಇನ್ನೊಮ್ಮೆ ಒಮ್ಮತ ಅಭಿಪ್ರಾಯದೊಂದಿಗೆ ಆಯೋಜಿಸ ಬೇಕು ಎಂದು ಹೇಳಿದರು. ಸಂಘದ ಸದಸ್ಯ ಎಸ್.ಎಚ್. ಖಂಡೋಬಾ, ಬೋಧಕೇತರ ಸಂಘದ ಸದಸ್ಯ ವೇದಕುಮಾರ್ ಇದ್ದರು.

ನ್ಯಾಯಾಲಯಕ್ಕೆ ಮೊರೆ

ಎಲ್ಲ ಸಂಘಟನೆಗಳ ಸಹಮತ ಇಲ್ಲದೇ ನಡೆಯುತ್ತಿರುವ ಶೈಕ್ಷಣಿಕ ಸಮ್ಮೇಳನದ ದಿನದಂದು ಉಪನ್ಯಾಸಕರಿಗೆ ಅನ್ಯಕಾರ್ಯ ನಿಮಿತ್ತ ರಜೆ ಘೋಷಿಸಲು ಬರುವುದಿಲ್ಲ. ರಜೆ ಘೋಷಿಸಿದರೆ ವಿದ್ಯಾರ್ಥಿಗಳಿಗಾಗುವ ನಷ್ಟಕ್ಕೆ ಯಾರು ಹೊಣೆ? ಆ ದಿನದ ನಷ್ಟವನ್ನು ಭರ್ತಿ ಮಾಡಲು ಭಾನುವಾರ ಕಾಲೇಜುಗಳನ್ನು ನಡೆಸಬೇಕು. ತಪ್ಪಿದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಪಿ.ಮಹದೇವಸ್ವಾಮಿ ಎಚ್ಚರಿಕೆ ನೀಡಿದರು.

 

ವರ್ಗಾವಣೆಗೆ ಒತ್ತಾಯ

ಶೈಕ್ಷಣಿಕ ಸಮ್ಮೇಳನ ಆಯೋಜಿಸಲು ಎಲ್ಲ ಉಪನ್ಯಾಸಕರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲಾರದೇ ಏಕಪಕ್ಷೀಯವಾಗಿ ವರ್ತಿಸುತ್ತಿರುವ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರೇ ಈಗಿನ ಗೊಂದಲಕ್ಕೆ ಕಾರಣರಾಗಿದ್ದಾರೆ.ಇವರನ್ನು ಬೇರೆಡೆ ವರ್ಗಾಯಿಸುವಂತೆ ಸರ್ಕಾರವನ್ನು ಒತ್ತಾ ಸುವುದಾಗಿ ಪಿ.ಮಹದೇವಸ್ವಾಮಿ ತಿಳಿಸಿ ದರು.ಸಮ್ಮೇಳನ ಆಯೋಜನೆ ಕುರಿತು ಎಲ್ಲ ಉಪನ್ಯಾಸಕರ ಅಭಿಪ್ರಾಯ ಪಡೆಯದೇ ಕೆಲವೇ ಕೆಲವು ವ್ಯಕ್ತಿಗಳಿಗೆ ಉಪನಿರ್ದೇಶಕರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry