ಶಿಕ್ಷಣ ಕೇಸರೀಕರಣ: ಆರೋಪ

7

ಶಿಕ್ಷಣ ಕೇಸರೀಕರಣ: ಆರೋಪ

Published:
Updated:

ಮುಳಬಾಗಲು: ಶಿಕ್ಷಣವನ್ನು ಖಾಸಗೀಕರಣ ಮತ್ತು ಕೇಸರೀಕರಣ ಮಾಡುವುದಕ್ಕಾಗಿ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರವು ಬಳಸಿಕೊಳ್ಳುತ್ತಿದೆ ಎಂದು ರಾಜ್ಯ ಎಸ್‌ಎಫ್‌ಐ ಅಧ್ಯಕ್ಷ ಎಚ್.ಆರ್.ನವೀನ್‌ಕುಮಾರ್ ಆರೋಪಿಸಿದರು. ಈಚೆಗೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸದೆ, ಖಾಸಗಿ ಶಾಲೆಗೆ ಮಂಜೂರಾತಿ ನೀಡುವ ಇಬ್ಬಗೆ ನೀತಿಯಿಂದ ಶಿಕ್ಷಣವು ಬಡವರಿಗೆ ಸೀಗುತ್ತಿಲ್ಲ ಎಂದರು.ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಶೇ. 4 ರಷ್ಟು ಮಾತ್ರ ಹಣ ಬಜೆಟ್‌ನಲ್ಲಿ ಮೀಸಲಿಟ್ಟರೆ, ರಾಜ್ಯ ಸರ್ಕಾರ ಶೇ.17ರಷ್ಟು ಹಣವನ್ನು 14ಕ್ಕೆ ಕುಗ್ಗಿಸಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕೈಗೆ ಸಿಗದಷ್ಟು ದುಬಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನವಾದಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಿ.ಗೀತಾ ಮಾತನಾಡಿ, ಅಪಾಯಕಾರಿ ಪ್ರವೃತ್ತಿ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.ಡಿವೈಎಫ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಸಂಪಂಗಿ, ರಾಜ್ಯ ಎಸ್‌ಎಫ್‌ಐ ಉಪಾಧ್ಯಕ್ಷ ಹುರುಳಿ ಉಮೇಶ್, ಜಿಲ್ಲಾ ಎಸ್‌ಎಫ್‌ಐ ಅಧ್ಯಕ್ಷ ಶೆಟ್ಟಿಗಾನಹಳ್ಳಿ ಅಂಬರೇಶ್, ಉಪಾಧ್ಯಕ್ಷ ಎನ್.ಅಂಬರೀಶ್, ಸಿದ್ದತಾ ಸಮಿತಿ ಅಧ್ಯಕ್ಷ ಜಿ.ಪಾಪಣ್ಣ, ಕಾರ್ಯದರ್ಶಿ ತಾಯಲೂರು ರಮೇಶ್, ತಾಲ್ಲೂಕು ಎಸ್‌ಎಫ್‌ಐ ಅಧ್ಯಕ್ಷಶಿವಶಂಕರ್,ಉಪಾಧ್ಯಕ್ಷ ಗುಜ್ಜಮಾರಂಡಹಳ್ಳಿ ಮುನಿರಾಜು, ವಕೀಲ ಡಿ.ವಿ.ಅಶ್ವನಾಥಗೌಡ,  ಮುಖಂಡರಾದ ಬಿ.ವಿ.ನಾಗಿರೆಡ್ಡಿ, ಸಂಗಸಂದ್ರರಾಮಚಂದ್ರ, ಪುಣ್ಯಹಳ್ಳಿ ಶಂಕರ್, ವಾಸುದೇವರೆಡ್ಡಿ, ರಾಮಚಂದ್ರಪ್ಪ, ದಲಿತ ಮುಖಂಡ ಸತೀಶ್,  ವಾಸುದೇವರೆಡ್ಡಿ ಮುಂತಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry