ಶಿಕ್ಷಣ-ಕೈಗಾರಿಕೆ ನಡುವೆ ಸೇತುಬಂಧ ಅಗತ್ಯ

7

ಶಿಕ್ಷಣ-ಕೈಗಾರಿಕೆ ನಡುವೆ ಸೇತುಬಂಧ ಅಗತ್ಯ

Published:
Updated:

ಗುಲ್ಬರ್ಗ: ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ನಡುವೆ ಸೇತುಬಂಧ ನಿರ್ಮಿಸಿದಾಗ ಮಾತ್ರ ಸ್ವಯಂ ಉದ್ಯೋಗ ಹಾಗೂ ಉದ್ಯಮಶೀಲ ಸಮರ್ಥರನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಡಾ.ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು.ಗುಲ್ಬರ್ಗದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ  ಬುಧವಾರ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಂತ್ರಿಕ ತರಬೇತಿ ಹಾಗೂ ಸ್ವ ಉದ್ಯೋಗ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಸಂಸ್ಥೆಯಿಂದ ಹೊರಬರುವ ಪ್ರತಿ ವಿದ್ಯಾರ್ಥಿಯೂ ನಿರುದ್ಯೋಗಿ ಎಂಬ ಪಟ್ಟ ಧರಿಸುವ ಬದಲು, ಸ್ವಯಂ ಉದ್ಯೋಗಿಯಾಗಲು ಸಮರ್ಥ ಎಂಬ ಮನೋಭಾವದಿಂದ ಮುಂದೆ ಬರಬೇಕು.ಉದ್ಯಮ ಆರಂಭಿಸುವ ಸಾಹಸ ಹಾಗೂ ಜವಾಬ್ದಾರಿಗಳೊಂದಿಗೆ ಉತ್ಸಾಹವೂ ತುಂಬಿರುತ್ತದೆ ಎಂದರು.ಸದ್ಯದ ಪರಿಸ್ಥಿತಿಯಲ್ಲಿ ಗುಲ್ಬರ್ಗದಲ್ಲಿ ಕೌಶಲವಿರುವ ಮಾನವ ಸಂಪನ್ಮೂಲದ ಕೊರತೆ ಇದೆ. ಜಿಲ್ಲೆಯಲ್ಲಿ ಸಿಮೆಂಟ್ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ’ ಎಂದು ರಾಜಶ್ರೀ ಸಿಮೆಂಟ್‌ನ ಕಾರ್ಯಾಧ್ಯಕ್ಷ ಎಸ್.ಕೆ.ಗುಪ್ತಾ ಹೇಳಿದರು. ಎಸಿಸಿ ಸಿಮೆಂಟ್‌ನ ಏ.ಕೆ.ಸಕ್ಸೇನಾ ಮಾತನಾಡಿದರು.ಗುಲ್ಬರ್ಗದ ವಿಭಾಗೀಯ ಕಚೇರಿಯ ಸಹಾಯಕ ನಿರ್ದೇಶಕಿ ರುಬಿನಾ ಪರ್ವೀನ್ ಸ್ವಾಗತಿಸಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಮುರಳಿಧರ ರತ್ನಗಿರಿ ವಂದಿಸಿದರು. ಸರಸ್ವತಿ ರತ್ನ ಸಂಸ್ಥೆಯ ವಿಜಯಸಿಂಗ್ ಒಂದು ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry