ಶಿಕ್ಷಣ ಕ್ಷೇತ್ರದ ಖಾಸಗೀಕರಣ ಖಂಡನೆ

7

ಶಿಕ್ಷಣ ಕ್ಷೇತ್ರದ ಖಾಸಗೀಕರಣ ಖಂಡನೆ

Published:
Updated:

ಶಹಾಬಾದ: `ಕೈಗಾರಿಕೆ ಮತ್ತಿತರ ಉದ್ಯಮ ಕ್ಷೇತ್ರದ ಜೊತೆ ಶಿಕ್ಷಣವನ್ನೂ ಖಾಸಗಿಕರಗೊಳಿಸುತ್ತಿರುವ ಸರ್ಕಾರದ ನೀತಿ ಖಂಡನೀಯ. ವಿದ್ಯಾರ್ಥಿ, ಯುವಜನರು ಸೇರಿದಂತೆ ಜನಸಾಮಾನ್ಯರು ಇಂದು ಪ್ರತಿಹಂತದಲ್ಲೂ ಇಂದು ಸಂಕಟ ಎದುರಿಸುವ ಸ್ಥಿತಿ ಎದುರಾಗಿದೆ. ಬಂಡವಾಳಶಾಹಿಗಳು ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿರುವುದು ಆತಂಕ ಮೂಡಿಸಿದೆ~ ಎಂದು ಎಸ್‌ಯುಸಿಐ ಮುಖಂಡ ಎಂ.ಜಿ. ರಾಘವೇಂದ್ರ ಕಳವಳ ವ್ಯಕ್ತಪಡಿಸಿದರು.ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡ ಸ್ಥಳೀಯ ಮಟ್ಟದ ವಿದ್ಯಾರ್ಥಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉಪನ್ಯಾಸಕ ಎನ್.ರಘುನಂದನ್ ಮಾತನಾಡಿ, `ಯಾವುದೆ ಕ್ಷೇತ್ರದಲ್ಲಿ ವೈಜ್ಞಾನಿಕ ಚಿಂತನೆಯಿಂದ ಮಾತ್ರ ಮೌಲ್ಯಗಳು ಉಳಿಯಲು ಸಾಧ್ಯ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು~ ಎಂದರು. ಎಸ್.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ನಿರ್ಣಯಗಳು: ವಿದ್ಯಾರ್ಥಿ ಸಮುದಾಯದ ಪ್ರಸ್ತುತ ಶೈಕ್ಷಣಿಕ ಸಮಸ್ಯೆ, ಪರಿಹಾರ ಕುರಿತಂತೆ ಸಮಾವೇಶದಲ್ಲಿ ಹಲವು ವಿಷಯಗಳನ್ನು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಎಸ್.ಎಚ್. ಜಗನ್ನಾಥ, ಜಿ.ಜಿ.ವಣಕ್ಯಾಳ, ನಿಂಗಣ್ಣ ಜಂಬಗಿ, ಎಸ್.ಎಚ್.ಅಂಬಿಕಾ, ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿ, ಯುವಜನರು, ಶಿಕ್ಷಕರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry