ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ; ವಿಷಾದ

7

ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ; ವಿಷಾದ

Published:
Updated:
ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ; ವಿಷಾದ

ಹಾಸನ: `ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಗಮನಹರಿಸದಿರುವುದು ದುರಂತದ ವಿಚಾರ. ಹಲವು ಬಾರಿ ಮನವಿ ಮಾಡಿದರೂ ಶಿಕ್ಷಣ ಸಚಿವ ಕಾಗೇರಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ~ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿದರು.ಹಾಸನ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವೇದಿಕೆಯು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ನಾಲ್ಕನೆ ವರ್ಷದ ಪಠ್ಯಾಧರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.~ಪದವಿಪೂರ್ವ ಕಾಲೇಜು ಉಪನ್ಯಾಸಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇವುಗಳನ್ನು ಕಾಗೇರಿ ಗಮನಕ್ಕೂ ತಂದಿದ್ದೇವೆ. ಅವರು ಸಮಸ್ಯೆ ಬಗೆಹರಿಸುವಲ್ಲಿ ಆಸಕ್ತಿ ತೋರಿಸಿಲ್ಲ. ವರ್ಗಾವಣೆ ನೀತಿ ಬದಲಾಯಿಸಿದ್ದರಿಂದ ಅನೇಕ ಉಪನ್ಯಾಸಕರಿಗೆ ಅನುಕೂಲವಾಗಿದೆ. ಆದರೆ, ಆ ಕಾನೂನಿಗೂ ಕೆಲವು ತಿದ್ದುಪಡಿ ಮಾಡಬೇಕಾಗಿದೆ. ವಿವಿಧ ಕಾಲೇಜುಗಳಲ್ಲಿ ಸಾವಿರಕ್ಕೂ ಹೆಚ್ಚು ಉಪನ್ಯಾಸಕರ ಕೊರತೆ ಇದೆ. ಸಮಸ್ಯೆ ಎಂದರೆ ಸಚಿವರು ಉ ನ್ಯಾಸಕರಿಗೆ ಬಿಇಡಿ  ಕಡ್ಡಾಯ ಎನ್ನುತ್ತಿದ್ದಾರೆ. ಬಿಇಡಿ ಮಾಡಿದವರೇ ಉತ್ತಮ ಶಿಕ್ಷಕರು ಎನ್ನಲಾಗದು ಎಂದರು.ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಉಪನ್ಯಾಸಕ ಶ್ರೀಕಂಠ ಕೊಡಿಗೆ ಅವರು ~ಕನ್ನಡ ಸಾಹಿತ್ಯದ ಓದು ಮತ್ತು ಆಸಕ್ತಿಯ ನೆಲೆಗಳು~ ವಿಷಯ ಹಾಗೂ ಮೈಸೂರು ವಿ.ವಿ. ನಿವೃತ್ತ ಉಪನ್ಯಾಸಕ ಹಿ.ಶಿ ರಾಮಚಂದ್ರೇಗೌಡ ~ಜಾಗತೀಕರಣ ಮತ್ತು ಕನ್ನಡ ಭಾಷೆಯ ಸವಾಲುಗಳು~ ಕುರಿತು ಉಪನ್ಯಾಸ ನೀಡಿದರು.ತಿರುಪತಿಹಳ್ಳಿ ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಯದೇವಯ್ಯ, ಕ.ಸಾಪ ಜಿಲ್ಲಾ ಘಟಕದ ಅಧ್ಯಕ್ಷ ಉದಯರವಿ, ಎಚ್.ಟಿ.  ಸುರೇಶ್, ಶಿವಣ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry