ಶಿಕ್ಷಣ ನೈತಿಕ ಕರ್ತೃತ್ವ ಶಕ್ತಿ ನೀಡಲಿ: ಸ್ವಾಮಿ ಸರಸ್ವತಿ

7

ಶಿಕ್ಷಣ ನೈತಿಕ ಕರ್ತೃತ್ವ ಶಕ್ತಿ ನೀಡಲಿ: ಸ್ವಾಮಿ ಸರಸ್ವತಿ

Published:
Updated:

ಗುಲ್ಬರ್ಗ: ನೈತಿಕತೆ ಸಾಮರ್ಥ್ಯದೊಂದಿಗೆ ಮೇಳೈಸಿದ ಕರ್ತೃತ್ವ ಶಕ್ತಿ ಹಾಗೂ ಜವಾಬ್ದಾರಿ ಅರಿತ ಸ್ವಾತಂತ್ರ್ಯವನ್ನು ಶಿಕ್ಷಣ ನೀಡಲಿ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ಸ್ವಾಮಿ ವೀರೇಶಾನಂದ ಸರಸ್ವತಿ ಆಶಿಸಿದರು.ಆಶ್ರಮ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ `ವಿವೇಕ ಚಿಂತನ~ ರಾಜ್ಯ ಮಟ್ಟದ ಸಮಾವೇಶದಲ್ಲಿ ಶನಿವಾರ ಅವರು ಮಾತನಾಡಿದರು.ಚಾರಿತ್ರ್ಯವಂತ ಬದುಕು, ಬೌದ್ಧಿಕ ಸಾಮರ್ಥ್ಯದ ವಿಕಸನ, ಮಾನಸಿಕ ಶಕ್ತಿ ವೃದ್ಧಿ, ಸ್ವಾವಲಂಬನೆ, ನಿಸ್ವಾರ್ಥ ಬಯಕೆಗಳು ಶಿಕ್ಷಣದಿಂದ ದೊರೆಯಬೇಕು. ಬದುಕಿನಲ್ಲಿ ಸ್ವಾವಲಂಬನೆ, ಶ್ರಮ, ಸಾಮರ್ಥ್ಯ ಬರಬೇಕು ಎಂದ ಅವರು, ಶಿಕ್ಷಣವು ಯೋಗ್ಯತೆಯನ್ನು ನೀಡಬೇಕು. ಇಂದಿನ ಶಿಕ್ಷಣದಲ್ಲಿ  `ಪರ್ಸೆಂಟೇಜ್~ ಎಂಬುದು ಶಾಲೆ, ಕಚೇರಿ, ಗುತ್ತಿಗೆ ಮತ್ತಿತರ ವ್ಯವಹಾರದಲ್ಲಿ `ಮಾಮೂಲಿ~ಯಾಗಿದೆ ಎಂದು ಲಾಸ್ಯವಾಡಿದರು.ಶಿಕ್ಷಣದಿಂದ ಸುಧಾರಣೆ ಸಾಧ್ಯ ಎಂಬ ವಿವೇಕಾನಂದರ ನಿಲುವು ಇಂದು ವಿಶ್ವವ್ಯಾಪಿಯಾಗಿದೆ. ಬದುಕು ಬಿದ್ದಾಗ ಎಚ್ಚರಿಸುವವನೇ ನಿಜವಾದ ಗುರು. ಅಂತಹ ಚಿಂತನೆ ವಿವೇಕಾನಂದರದ್ದು ಎಂದು ಗದಗ-ವಿಜಾಪುರ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿ ಹೇಳಿದರು.ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ, ರಾಮಕೃಷ್ಣ ವಿವೇಕಾನಂದ ಆಶ್ರಮಗಳ ಸ್ವಾಮಿಗಳಾದ ಯೋಗೇಶ್ವರಾನಂದಜಿ ಮಹಾರಾಜ್, ಪ್ರಕಾಶಾನಂದಜಿ, ಜ್ಯೋತಿರ್ಮಯಾನಂದಜಿ, ಬ್ರಹ್ಮನಿಷ್ಠಾನಂದಜಿ, ಗದಾಧರಾನಂದಜಿ, ಶಾರದೇಶಾನಂದಜಿ ಸ್ವಾಮಿ ಮಹೇಶ್ವರಾನಂದ, ಸುವೇದಾನಂದ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry