ಶಿಕ್ಷಣ ಮನುಷ್ಯನಿಗೆ ಬಹುದೊಡ್ಡ ಆಸ್ತಿ

ಮಂಗಳವಾರ, ಜೂಲೈ 23, 2019
20 °C

ಶಿಕ್ಷಣ ಮನುಷ್ಯನಿಗೆ ಬಹುದೊಡ್ಡ ಆಸ್ತಿ

Published:
Updated:

ಶಿಕಾರಿಪುರ: ಜೀವನದಲ್ಲಿ ವ್ಯಕ್ತಿಗೆ ಬಹುದೊಡ್ಡ ಆಸ್ತಿ ಶಿಕ್ಷಣವಾಗಿದ್ದು, ವಿದ್ಯಾರ್ಥಿ ಭೌತಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ಬೆಳೆಯಲು ಶಿಕ್ಷಣ ಸಹಕಾರಿಯಾಗಿದೆ ಎಂದು ಪದವಿಪೂರ್ವ ಶಿಕ್ಷಣ ವಿಭಾಗದ ಜಿಲ್ಲಾ ಉಪ ನಿರ್ದೇಶಕ ವಿ.ಕೆ. ನಾಗರಾಜ್ ಹೇಳಿದರು.ಪಟ್ಟಣದ ಕುಮದ್ವತಿ ವಸತಿಯುತ ಕೇಂದ್ರೀಯ ಶಾಲೆ ಸಭಾಂಗಣದಲ್ಲಿ ಶನಿವಾರ ನಡೆದ ಕುಮದ್ವತಿ ವಸತಿಯುತ ಕೇಂದ್ರೀಯ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ ಮಾತನಾಡಿದರು. ಪದವಿಪೂರ್ವ ಕಾಲೇಜಿನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ರೇವತಿ, ಸಂತೋಷ್, ಶ್ರೀನಾಥ್, ಪ್ರಶಾಂತ್, ಅಪೇಕ್ಷಾ, ಪ್ರವೀಣ, ಮಹೇಶ್, ಕೋಮಲ ಅವರನ್ನು ಸನ್ಮಾನಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಪ್ಪ, ನಿವೃತ್ತ ಪ್ರಾಂಶುಪಾಲ ಬಿ.ಎಸ್. ಪಾಟೀಲ್, ಸಂಸ್ಥೆ ನಿರ್ದೇಶಕ ಶಿವಕುಮಾರ್, ಮುಖ್ಯ ಆಡಳಿತಾಧಿಕಾರಿ ಕರ್ನಲ್ ರಾಮಚಂದ್ರ, ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು.ಡಾ.ವೀರೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಶ್ರೀಕಲಾ ಸ್ವಾಗತಿಸಿದರು, ರಶ್ಮಿ ವಂದಿಸಿ, ಶ್ರಾವ್ಯಾ, ವೀಣಾ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry