ಶಿಕ್ಷಣ: ರಾಷ್ಟ್ರೀಯ ವಿಚಾರ ಸಂಕಿರಣ

7

ಶಿಕ್ಷಣ: ರಾಷ್ಟ್ರೀಯ ವಿಚಾರ ಸಂಕಿರಣ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಎಸ್‌ಸಿ/ಎಸ್‌ಟಿ ಶಿಕ್ಷಕರ ಸಂಘದಿಂದ ‘ಉನ್ನತ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನ’ ವಿಷಯವಾಗಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಏರ್ಪಡಿಸಲು ನಿರ್ಧರಿಸಲಾಗಿದೆ.ಉನ್ನತ ಶಿಕ್ಷಣದಲ್ಲಿ ದಲಿತರು ಮತ್ತು ಆದಿವಾಸಿಗಳ ಸ್ಥಿತಿ–ಗತಿ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ, ಭಾರತೀಯ ಬೌದ್ಧಿಕ ಜಗತ್ತಿಗೆ ದಲಿತರ ಕೊಡುಗೆ, ದಲಿತ ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ನ್ಯಾಯ, ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನಾ ಕೇಂದ್ರಗಳು ಮತ್ತು ಅವುಗಳ ಕೊಡುಗೆ ಸೇರಿದಂತೆ ಹಲವು ವಿಷಯಗಳ ಮೇಲೆ ಪ್ರಬಂಧ ಮಂಡಿಸಲು ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಲಾಗಿದೆ.ಆಸಕ್ತರು ಸೆ. 25ರೊಳಗೆ ಪ್ರಬಂಧದ ಸಾರಾಂಶವನ್ನು ಕಳುಹಿಸಿಕೊಡಬೇಕು. ವಿವರಗಳಿಗೆ ಡಾ. ನಾಗೇಶ್‌ ಬೆಟ್ಟಕೋಟೆ, ಸಂಯೋಜಕರು, ರಾಷ್ಟ್ರೀಯ ವಿಚಾರ ಸಂಕಿರಣ, ಬೆಂಗಳೂರು ವಿಶ್ವವಿದ್ಯಾ ಲಯ, ಜ್ಞಾನಭಾರತಿ ಕ್ಯಾಂಪಸ್‌, ಬೆಂಗಳೂರು (080–22691708) ಈ ವಿಳಾಸ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry