ಶನಿವಾರ, ಮೇ 8, 2021
25 °C

ಶಿಕ್ಷಣ ವಂಚಿತ ಮಕ್ಕಳು: ಹೈಕೋರ್ಟ್ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕು. ಅದರಿಂದ ಅವರು ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮೂಲಭೂತ ಕರ್ತವ್ಯ' ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಅಲ್ಲದೆ, ರಾಜ್ಯದಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಒಟ್ಟು ಸಂಖ್ಯೆ 54 ಸಾವಿರಕ್ಕಿಂತ ಹೆಚ್ಚಿರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.ರಾಜ್ಯದಲ್ಲಿ ಅಂದಾಜು 54 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಹೈಕೋರ್ಟ್

ಸತತ 60 ದಿನಗಳ ಕಾಲ ಶಾಲೆಗೆ ಹಾಜರಾಗದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಗುಳಿದಿರುವವ ಎಂದು ಈಗಿರುವ ಕಾನೂನು ವ್ಯಾಖ್ಯಾನಿಸುತ್ತಿದೆ.ಈ ವ್ಯಾಖ್ಯಾನದ ಪುನರ್‌ಪರಿಶೀಲನೆ ಅಗತ್ಯವಿದೆ. 29 ದಿನ ಶಾಲೆಗೆ ಬಾರದೆ, ಮಧ್ಯದಲ್ಲಿ ಒಂದು ದಿನ ಬಂದು ಪುನಃ ಗೈರುಹಾಜರಾಗುವ ವಿದ್ಯಾರ್ಥಿ `ಶಾಲೆ ಯಿಂದ ಹೊರಗುಳಿದಿರುವ' ಎಂದೆನಿಸಿಕೊಳ್ಳುತ್ತಿಲ್ಲ.

- ವಕೀಲ ಆದಿತ್ಯ ಸೋಂಧಿ, ಈ ಪ್ರಕರಣದ ಅಮೈಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ)

ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿಕೊಂಡಿದೆ. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಗುರುವಾರ ನಡೆಸಿತು.ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯನಿ ಚಾಮರಾಜ್ ಅವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಪೀಠ, ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸಂಖ್ಯೆ 6ರಿಂದ 7 ಲಕ್ಷ ಇದ್ದಿರಲೂಬಹುದು ಎಂದು ಆತಂಕ ವ್ಯಕ್ತಪಡಿಸಿತು.`ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗಳಿಗೆ ಮರಳಿ ತರಲು ಪಾಲಕರಲ್ಲಿ ಜಾಗೃತಿ ಮೂಡಿಸಬೇಕು. ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣದಿಂದ ವಂಚಿತರಾಗಿರಬಹುದು.

ಶಾಲೆಗೆ ಬಂದರೆ ಅವರಿಗೆ ದೊರೆಯುವ ಸೌಲಭ್ಯಗಳ ಕುರಿತು ಮನವರಿಕೆ ಮಾಡಬೇಕು. ಈ ಕಾರ್ಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಕೈಜೋಡಿಸಬೇಕು' ಎಂದು ಪೀಠ ಕಿವಿಮಾತು ಹೇಳಿತು. ಮಕ್ಕಳನ್ನು ಶಾಲೆಗೆ ಕಳುಹಿಸಲು ದುರ್ಬಲ ವರ್ಗದ ಪಾಲಕರಿಗೆ ಹಣಕಾಸಿನ ನೆರವು ನೀಡಬಹುದು.

ಅಂಗನವಾಡಿಗೆ ದಾಖಲಾಗುವ ಮಕ್ಕಳು, ಅಲ್ಲಿಂದ ನೇರವಾಗಿ ಶಾಲೆಗಳಿಗೆ ದಾಖಲಾಗುವಂತೆ ನಿಗಾ ವಹಿಸಬೇಕು. ಶಿಕ್ಷಣದ ಸಲುವಾಗಿ ಕೇಂದ್ರ ಸರ್ಕಾರ ಸಾಕಷ್ಟು ನೆರವು ಒದಗಿಸುತ್ತಿದೆ. ಆದರೆ ಕೇಂದ್ರ ನೀಡುವ ಹಣಕಾಸಿನ ಅನುದಾನವನ್ನು ಕೆಲವು ರಾಜ್ಯಗಳು ಬಳಸಿಕೊಳ್ಳುತ್ತಿಲ್ಲ ಎಂದು ಪೀಠ ಹೇಳಿತು.ಪಾಲಕರು ಒಂದು ಊರಿನಿಂದ ಇನ್ನೊಂದು ಊರಿಗೆ ಕೆಲಸ ಅರಸಿ ವಲಸೆ ಹೋಗುತ್ತಿರುವುದೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಒಂದು ಕಾರಣ. ಐದನೆಯ ತರಗತಿಯ ವಿದ್ಯಾರ್ಥಿ ನಾಲ್ಕನೆಯ ತರಗತಿಯ ವಿದ್ಯಾರ್ಥಿ ಮಾಡುವ ಬೌದ್ಧಿಕ ಕೆಲಸಗಳನ್ನು ಮಾಡಲು ವಿಫಲನಾದರೆ, ಖಿನ್ನತೆಗೆ ಒಳಗಾಗಿ ಶಾಲೆ ತೊರೆಯುವ ಸಾಧ್ಯೆತೆಯೂ ಇರುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೀಠಕ್ಕೆ ವಿವರಣೆ ನೀಡಿದರು.`ಮಕ್ಕಳನ್ನು ಶಾಲೆಗಳಿಗೆ ಮರಳಿ ಸೇರಿಸುವುದನ್ನು ಪ್ರೋತ್ಸಾಹಿಸುವ ಯೋಜನೆ ಪಟ್ಟಿ ನಮಗೆ ಸಲ್ಲಿಸಿ. ಶಾಲೆ ತೊರೆದ ಮಕ್ಕಳ ಜೊತೆ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಘಟನೆಗಳ ಪಟ್ಟಿಯನ್ನೂ ನೀಡಿ' ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.