ಗುರುವಾರ , ಜೂನ್ 24, 2021
24 °C

ಶಿಕ್ಷಣ ಸಂಯೋಜಕರ ವರ್ಗಾವಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ತಾಲ್ಲೂಕಿನ ಉರ್ದು ಶಿಕ್ಷಣ ಸಂಯೋಜಕರನ್ನು ಕೂಡಲೇ ಬದಲಾಯಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಮುಖಂಡರು ಸೋಮವಾರ ಉಪ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.ದರ್ಗಾಶಾಹಿ ಮಸೀದಿಯ ಪದಾಧಿಕಾರಿಗಳು, ಎಸ್‌ಡಿಎಂಸಿ ಅಧ್ಯಕ್ಷರು ಈಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಯಾಜ್ ಅಹ್ಮದ್ ಅಮಾನತಿನ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಮುನಿರಾಜು ನಡವಳಿಕೆ ಬಗ್ಗೆ ಸಹ ವಿಷಯ ಪ್ರಸ್ತಾಪಿಸಲಾಗಿತ್ತು.ಚರ್ಚೆ ನಂತರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆಗೆ ಶಾಲೆಗೆ ಆಗಮಿಸಿದ ಶಿಕ್ಷಣ ಸಂಯೋಜಕರು ಬಾಲಿಶವಾಗಿ ವರ್ತಿಸಿದ್ದಾರೆ. ಶಿಕ್ಷಕ ಮುನಿರಾಜು ಅವರನ್ನು ಮಾಜಿ ಪೌರಾಧ್ಯಕ್ಷ ಅಫ್ರೋಜ್‌ಪಾಷರ ಮೇಲೆ ಎತ್ತಿ ಕಟ್ಟಿ, ಬೆದರಿಕೆ ಹಾಕಿದ್ದಾರೆ ಎಂದು ಮುಖಂಡರು ಆರೋಪಿಸಿದರು.ಅಫ್ರೋಜ್‌ಪಾಷ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಕೆ ನಿಗ್ರಹಿಸಲು ವಿಫಲವಾಗಿರುವ ಹಿರಿಯ ಅಧಿಕಾರಿಗಳು ಬಡಾವಣೆಯ ಗಣ್ಯ ವ್ಯಕ್ತಿಗಳ ಮೇಲೆ ಕೀಳು ಮಟ್ಟದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.ಸ್ಥಳಕ್ಕೆ ಆಗಮಿಸಿದ ಉಪನಿರ್ದೇಶಕ ಗೋವಿಂದಯ್ಯ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಸಂಬಂಧ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಅಬ್ದುಲ್ ಖಯ್ಯೂಂ, ಬಾಬಾ ಜಾನ್, ನಯಾಜ್, ನವೇಜ್, ಫೈರೋಜ್, ನಿಸಾರ್ ಅಹ್ಮದ್, ಜಮೀರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.