ಶಿಕ್ಷಣ ಸಂಸ್ಥೆಗಳ ಮೂಲಕ ಉತ್ತಮ ಕೆಲಸ

7
ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯ

ಶಿಕ್ಷಣ ಸಂಸ್ಥೆಗಳ ಮೂಲಕ ಉತ್ತಮ ಕೆಲಸ

Published:
Updated:
ಶಿಕ್ಷಣ ಸಂಸ್ಥೆಗಳ ಮೂಲಕ ಉತ್ತಮ ಕೆಲಸ

ಬೆಂಗಳೂರು: ‘ಒಂದು ಶಿಕ್ಷಣ ಸಂಸ್ಥೆ ಸುವರ್ಣ­ ಮಹೋತ್ಸ­ವವನ್ನು ಆಚರಿಸಿ­ಕೊಳ್ಳುತ್ತಿರು­ವುದು ಹೆಮ್ಮೆಯ ಸಂಗತಿ’ ಎಂದು ಹಿರಿಯ ಸಾಹಿತಿ ಡಾ.ಚಂದ್ರ­ಶೇಖರ ಕಂಬಾರ ಅಭಿಪ್ರಾಯಪಟ್ಟರು.ಕೈರಳಿ ನಿಕೇತನ ಶಿಕ್ಷಣ ಟ್ರಸ್ಟ್‌ನ ಇಂದಿರಾನಗರ ಪ್ರೌಢಶಾಲೆಯ ಸುವರ್ಣ­ಮಹೋತ್ಸವ ಮತ್ತು ಕೆ.ಎನ್‌.­ಇಂಗ್ಲಿಷ್‌ ಪ್ರೌಢಶಾಲೆಯ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕೇರಳ ಅತ್ಯಂತ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳನ್ನು ಹೊಂದಿ­ರುವ ರಾಜ್ಯ. ಅಲ್ಲಿನವರು ಇಲ್ಲಿಗೆ ಬಂದು ನಮ್ಮ ಸಂಸ್ಕೃತಿ­ಯನ್ನು ಅಳವಡಿಸಿ­ಕೊಳ್ಳುವ ಜೊತೆಗೆ ತಮ್ಮ ಮೂಲ ಸಂಸ್ಕೃತಿ ಉಳಿಸಿ­ಕೊಳ್ಳಬೇಕು ಎಂದರು.ಸಂಸದ ಪಿ.ಸಿ.ಮೋಹನ್‌ ಮಾತ­ನಾಡಿ, ಕೈರಳಿ ನಿಕೇತನ ಶಿಕ್ಷಣ ಟ್ರಸ್ಟ್‌ ಯಾವುದೇ  ಬೇಧವಿಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ರಾಜ್ಯ­ದಲ್ಲಿ ಈವರೆಗೂ 11 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ 4 ಸಾವಿರ  ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಶ್ಲಾಘಿಸಿದರು.ಇದೇ ವೇಳೆ ಜೋಗುಪಾಳ್ಯದಲ್ಲಿರುವ ಟ್ರಸ್ಟ್‌ನ ಶಾಲೆಗೆ ಸಂಸದರ ನಿಧಿಯಿಂದ  ₨25 ಲಕ್ಷ ನೀಡಲಾಗುವುದು ಎಂದರು.ಸಚಿವ ಕೆ.ಜೆ.ಜಾರ್ಜ್‌, ಶಾಸಕ ಎನ್‌.ಎ.ಹ್ಯಾರೀಸ್‌, ನಿವೃತ್ತ ಐಎಎಸ್‌ ಅಧಿಕಾರಿ ಡಾ.ಜೆ.ಅಲೆಕ್ಸಾಂಡರ್‌, ಟ್ರಸ್ಟ್‌ ಅಧ್ಯಕ್ಷ ಸಿ.ಜೆ.ಕುಂಚೇರಿಯ   ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry