ಬುಧವಾರ, ಜೂನ್ 23, 2021
28 °C

ಶಿಕ್ಷಣ ಹಕ್ಕು ಕಾಯ್ದೆ ಜಾರಿ ವಿಳಂಬವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರ 2009ರಲ್ಲಿ ಜಾರಿಗೆ ತಂದ `ಶಿಕ್ಷಣದ ಹಕ್ಕು ಕಾಯ್ದೆ~ಯನ್ನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. 2012-13ರ ಶೈಕ್ಷಣಿಕ ವರ್ಷದಿಂದ  ಜಾರಿಗೆ ತರುತ್ತೇವೆ ಎಂದು ಶಿಕ್ಷಣ ಸಚಿವರು ಪದೇ ಪದೇ ಹೇಳಿದರೂ ಅದಕ್ಕೆ ಅಗತ್ಯವಾದ ನಿಯಮಾವಳಿ ರೂಪಿಸಲು ಸರ್ಕಾರ ವಿಳಂಬ ಮಾಡುತ್ತಿದೆ.ಶಿಕ್ಷಣ ತಜ್ಞ ಡಿ. ಜಗನ್ನಾಥ ರಾವ್ ನೇತೃತ್ವದ ಸಮಿತಿ ಸಭೆಗಳನ್ನು ನಡೆಸಿ, 5ನೇ ಕರಡು ನಿಯಮಗಳನ್ನು 2010ರಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಮುಂದಿನ ಕ್ರಮ ತೆಗೆದುಗೊಂಡಿಲ್ಲ.ಕ್ಯಾಪಿಟೇಶನ್ ಹಾವಳಿ ತಡೆಯಲು ಶಿಕ್ಷಣ ಹಕ್ಕು ಕಾಯ್ದೆ ಪ್ರಬಲವಾದ ಅಸ್ತ್ರ. ಕಾಯ್ದೆ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುವುದನ್ನು ನಿಷೇಧಿಸಿದೆ. ಹಾಗೆಯೇ, ಶಾಲಾ ಪ್ರವೇಶಕ್ಕೆ ಜನನ ಪ್ರಮಾಣ ಪತ್ರ, ವರ್ಗಾವಣೆ ಪತ್ರದ ಅಗತ್ಯವಿಲ್ಲ.

 

18 ವರ್ಷ ತುಂಬುವವರೆಗೆ ಮೂಲಭೂತ ಶಿಕ್ಷಣ ಪಡೆಯಲು  ಕಾಯ್ದೆ ನೆರವಾಗುತ್ತದೆ. ಈ ಕಾಯಿದೆ ಜಾರಿಗೆ ಅನೇಕ ರಾಜ್ಯ ಸರ್ಕಾರಗಳು ಉತ್ಸಾಹ ತೋರಿಸಿವೆ. ಕರ್ನಾಟಕ ಸರ್ಕಾರ ಇದನ್ನು ಜಾರಿಗೆ ತರುವ ವಿಷಯದಲ್ಲಿ ಹೆಚ್ಚಿನ ಉತ್ಸಾಹ ತೋರಿಸದೇ ಇರುವುದಕ್ಕೆ ಕಾರಣವೇನು?

-

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.