ಶಿಕ್ಷೆಯಿಂದ ಪಾರು

7

ಶಿಕ್ಷೆಯಿಂದ ಪಾರು

Published:
Updated:

ಮೆಲ್ಬರ್ನ್ (ಪಿಟಿಐ):ಮಹಿಳಾ ರೋಗಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ತಪ್ಪಿತಸ್ಥರು ಎಂದು ಸಾಬೀತಾಗಿದ್ದರೂ ಜೈಲು ಶಿಕ್ಷೆಯಿಂದ ಪಾರಾಗಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.2011ರ ಜನವರಿಯಲ್ಲಿ ಅಡಿಲೇಡ್‌ವುಡ್‌ವಿಲ್ಲೆ ವೆಸ್ಟ್ ಫಿಸಿಯೊಥೆರಪಿ ಕ್ಲಿನಿಕ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಭರತ್ ದೇವದಾಸ್ (35) ಎಂಬುವವರು ತಪ್ಪಿತಸ್ಥರು ಎಂದು ಸಾಬೀತಾಗಿತ್ತು. ಬುಧವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ದಕ್ಷಿಣ ಆಸ್ಟ್ರೇಲಿಯಾ ಜಿಲ್ಲಾ ನ್ಯಾಯಾಧೀಶ ರೌಫ್ ಸೌಲಿಯೊ, ಆರೋಪಿ ದೇವದಾಸ್‌ಗೆ 2 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿದರು.  ಬಳಿಕ ಶಿಕ್ಷೆಯ ಅವಧಿ ರದ್ದುಗೊಳಿಸಿ 5 ಸಾವಿರ ಡಾಲರ್ ಸನ್ನಡತೆಯ ಬಾಂಡ್ ಬರೆದುಕೊಡಲು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry