ಬುಧವಾರ, ಮೇ 12, 2021
18 °C

ಶಿಕ್ಷೆ ಮುಗಿದರೂ ಪಾಕಿಸ್ತಾನಿಗಳು ಜೈಲಿನಲ್ಲೇಕೆ ಇದ್ದಾರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ (ಐಎಎನ್ಎಸ್): ಶಿಕ್ಷೆ ಮುಗಿದರೂ ಪಾಕಿಸ್ತಾನಿ ಅಪರಾಧಿಗಳು ಸೇರಿದಂತೆ ಮಾನಸಿಕ ಸಮಸ್ಯೆ ಹಾಗೂ ಕಿವಿ ಕೇಳದ ಹಾಗೂ ಮಾತು ಬಾರದ ವಿದೇಶಿಯರನ್ನು ಅವಧಿ ಮೀರಿ ಜೈಲಿನಲ್ಲಿ ಇರಿಸಿರುವ ಕುರಿತು ಸುಪ್ರೀಂ ಕೋರ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

~ಇಂಥ ಪ್ರಕರಣ ಅತ್ಯಂತ ನೋವು ತರುವಂತದ್ದು. ಈ ಪ್ರಕರಣದಲ್ಲಿ ಇರುವ ಸಮಸ್ಯೆಯಾದರೂ ಏನು~ ಎಂದು ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ ವಿಭಾಗೀಯ ಪೀಠವು ಪ್ರಶ್ನಿಸಿತು.

ಒಟ್ಟು 16 ವಿದೇಶಿಯರ ಪೈಕಿ ಪಾಕಿಸ್ತಾನದ 14 ಮಂದಿ ಕೈದಿಗಳು ಇನ್ನೂ ಜೈಲಿನಲ್ಲೇ ಇದ್ದಾರೆ. ಇವರಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ, ಕಿವಿ ಕೇಳದ ಹಾಗೂ ಮಾತೂ ಬಾರದವರು ಇರುವುದು ನ್ಯಾಯಾಲಯದ ಕೋಪಕ್ಕೆ ಮತ್ತಷ್ಟು ಕಾರಣವಾಯಿತು.

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭಾನುವಾರ ಭೇಟಿ ಮಾಡಿದ ವಿಷಯವನ್ನು ಪ್ರಸ್ತಾಪಿಸಿ ~ಈ ಸೆರೆಯಾಳುಗಳ ಸಮಸ್ಯೆಯನ್ನು ಉನ್ನತ ಮಟ್ಟದಲ್ಲಿ ಏಕೆ ಚರ್ಚಿಸಬಾರದು?~ ಎಂದು ನ್ಯಾಯಾಲಯ ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲ ಭೀಮ್ ಸಿಂಗ್ ಅವರ ಜತೆ ಕುಳಿತು ಚರ್ಚಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಪಿ.ಮಲ್ಹೋತಾ ಅವರು ನ್ಯಾಯಾಲಯವನ್ನು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಮೇ 2ಕ್ಕೆ ಪ್ರಕರಣವನ್ನು ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.