ಮಂಗಳವಾರ, ಮೇ 11, 2021
27 °C

ಶಿಕ್ಷೆ ಮುಗಿದ ಪಾಕ್ ಕೈದಿಗಳ ಬಿಡುಗಡೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಶಿಕ್ಷೆಯ ಅವಧಿ ಪೂರೈಸಿದ ಪಾಕಿಸ್ತಾನಿ ಮೂಲದ ಮಾನಸಿಕ ಅಸ್ವಸ್ಥ ಕೈದಿಗಳನ್ನು ಇನ್ನೂ ಯಾಕೆ ಅವರ ದೇಶಕ್ಕೆ ಕಳುಹಿಸಿ ಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, `ಇಂತಹ ಬಂಧನ ಸರಿಯಲ್ಲ~ ಎಂದಿದೆ.ಎರಡೂ ದೇಶಗಳ ಪ್ರಮುಖರು ಸಭೆ ಸೇರಿದಾಗಲಾದರೂ ಇಂತಹ ವಿಷಯಗಳ ಚರ್ಚೆಗೆ ಪ್ರಥಮ ಆದ್ಯತೆ ನೀಡಬೇಕೆಂದು ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.ಮಾನಸಿಕ ಅಸ್ವಸ್ಥ 21 ಕೈದಿಗಳ ಶಿಕ್ಷೆ ಪೂರ್ಣಗೊಂಡಿದ್ದರೂ ಇನ್ನೂ ಅವರನ್ನು ತಾಯ್ನಾಡಿಗೆ ಕಳುಹಿಸಿ ಕೊಟ್ಟಿಲ್ಲ.  ಅವರಲ್ಲಿ ಹಲವರು ಕಿವು ಡರು ಹಾಗೂ ಮೂಕರು. ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಮೊನ್ನೆಯಷ್ಟೆ ಭಾರತಕ್ಕೆ ಭೇಟಿ ನೀಡಿದಾಗಲೂ ಈ ವಿಷಯ ಚರ್ಚೆಗೆ ಬಾರದ ಹಿನ್ನೆಲೆಯಲ್ಲಿ ಪೀಠ ಈ ವಿಚಾರ ಪ್ರಸ್ತಾಪಿಸಿದೆ.ಮುಂದಿನ ಮೂರು ವಾರಗಳ ಒಳಗಾಗಿ ಇಂತಹ ಕೈದಿಗಳ ವಿಚಾರ ವಾಗಿ ಯಾವ ನಿರ್ಧಾರ ಕೈಗೊಳ್ಳ ಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದಿರುವ ಪೀಠ, ಈ ಕುರಿತಾದ ವಿಚಾರಣೆಯನ್ನು ಮೇ 2ಕ್ಕೆ ನಿಗದಿಗೊಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.