ಶಿಗ್ಗಾವಿ ಬಳಿ ಬಸ್ ಪಲ್ಟಿ: ನಾಲ್ವರ ಸಾವು

7

ಶಿಗ್ಗಾವಿ ಬಳಿ ಬಸ್ ಪಲ್ಟಿ: ನಾಲ್ವರ ಸಾವು

Published:
Updated:

ಶಿಗ್ಗಾವಿ: ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ನಿರ್ವಾಹಕ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು 30ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತೆವರಮೆಳ್ಳಿಹಳ್ಳಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶನಿವಾರ ಸಂಭವಿಸಿದೆ.ಮೃತರನ್ನು ನಿರ್ವಾಹಕ, ಹುಬ್ಬಳ್ಳಿ ನಿವಾಸಿ ವೇಣುಗೋಪಾಲ ಕುಲಕರ್ಣಿ (26), ಉದಯ ಕೃಷ್ಣಪ್ಪ ಬೆಂಗೇರಿ (55),ಭೀಮಸಿಂಗ್ ಶಂಕ್ರಪ್ಪ ರಾಠೋಡ(28) ಹಾಗೂ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಗೊಜನೂರು ಗ್ರಾಮದ ಕಲ್ಲಪ್ಪ ಶೇಖಪ್ಪ ಸೊರಟೂರ (26) ಎಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry