ಶಿಡ್ಲಘಟ್ಟಕ್ಕೆ ಹೆಚ್ಚುವರಿ ಬಸ್

7

ಶಿಡ್ಲಘಟ್ಟಕ್ಕೆ ಹೆಚ್ಚುವರಿ ಬಸ್

Published:
Updated:

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಸಂಸ್ಥೆಯು ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಮಾರ್ಗದಲ್ಲಿ ಆರು ನೂತನ ಮಾದರಿಯ ಬಸ್‌ಗಳ ಸೌಕರ್ಯ ಕಲ್ಪಿಸಿದ್ದು, ಪ್ರತಿ 15 ನಿಮಿಷಗಳಿಗೊಮ್ಮೆ ಬಸ್‌ಗಳು ಸಂಚರಿಸಲಿವೆ. ಮಾರ್ಗದಲ್ಲಿ ಬರುವ ಆಯಾ ಗ್ರಾಮಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುವುದು.ಚಿಕ್ಕಬಳ್ಳಾಪುರ, ಅಣಕನೂರು, ನಾಯನಹಳ್ಳಿ, ಜಾತವಾರಹೊಸಹಳ್ಳಿ, ಜಾತವಾರ, ಗಿಡ್ನಹಳ್ಳಿ, ಹೊಸಹುಡ್ಯ, ಹಂಡಿಗನಾಳ ಮತ್ತು ಶಿಡ್ಲಘಟ್ಟದಲ್ಲಿ ಬಸ್‌ಗಳು ನಿಲುಗಡೆಯಾಗಲಿದ್ದು, ಬೆಳಿಗ್ಗೆ 6.30ರಿಂದ ರಾತ್ರಿ 9 ಗಂಟೆಯವರೆಗೆ ಸಂಚರಿಸಲಿವೆ.ನೂತನ ಬಸ್‌ಗಳು ಜಿಪಿಎಸ್ ಮತ್ತು ಆಡಿಯೋ ಸೌಲಭ್ಯಗಳನ್ನು ಹೊಂದಿದ್ದು, ಆಯಾ ನಿಲ್ದಾಣಗಳ ಕುರಿತು ಸ್ವಯಂ ಚಾಲಿತ ಫಲಕದ ಮೇಲೆ ಮಾಹಿತಿ ನೀಡಲಿದೆ. ಪ್ರಯಾಣಿಕರಿಗೆ ಹತ್ತಲು ಮತ್ತು ಇಳಿಯಲು ಅನುಕೂಲವಾಗು ವಂತೆ ಸ್ವಯಂಚಾಲಿತ ಬಾಗಿಲು ಅಳವಡಿಸಲಾಗಿದೆ.`ಪ್ರಾಥಮಿಕವಾಗಿ ಈ ನೂತನ ಸೌಲಭ್ಯ ಕಲ್ಪಿಸಲಾಗಿದ್ದು, ಈ ಪ್ರಯೋಗ ಯಶಸ್ವಿಯಾದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ವಿವಿಧೆಡೆ ವಿಸ್ತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಜನರಿಗೆ ಹೆಚ್ಚಿನ ಕಲ್ಪಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ~ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry