ಶಿಥಿಲಗೊಂಡ ಬಸ್ ತಂಗುದಾಣ

7

ಶಿಥಿಲಗೊಂಡ ಬಸ್ ತಂಗುದಾಣ

Published:
Updated:
ಶಿಥಿಲಗೊಂಡ ಬಸ್ ತಂಗುದಾಣ

ಯಳಂದೂರು: ತಾಲ್ಲೂಕಿನ ಅಗ್ರಹಾರ ಗ್ರಾಮದ ಬಸ್‌ತಂಗುದಾಣ ಶಿಥಿಲಾ ವಸ್ಥೆಯಲ್ಲಿದ್ದು, ಶೀಘ್ರದಲ್ಲೇ ದುರಸ್ತಿ ಮಾಡಿಸಬೇಕು ಎಂದು ಪ್ರಯಾಣಿಕರ ಆಗ್ರಹಿಸಿದ್ದಾರೆ.20 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಾಣ ವಾದ ಬಸ್ ನಿಲ್ದಾಣ ಮುಂಭಾಗದ ಗೋಡೆಗಳು ಶಿಥಿಲವಾಗಿವೆ. ನಿಲ್ದಾಣದ ಪಕ್ಕದಲ್ಲೇ ಕೆರೆ ಇರುವುದರಿಂದ ವಿಷ ಜಂತುಗಳು ಸೇರಿಕೊಳ್ಳುವ ಅಪಾವಿದೆ. ಅಲ್ಲದೇ ಸಮೀಪದಲ್ಲಿ ತಿಪ್ಪೆಗುಂಡಿ ಇರುವು ದರಿಂದ ಪ್ರಯಾಣಿಕರು ವಾಸನೆ ಸಹಿಸಿ ಬಸ್‌ಗೆ ಕಾಯಬೇಕಿದೆ. ಹಾಗಾಗಿ ಪಂಚಾಯಿತಿ ವತಿಯಿಂದ ಇದನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.ಬಿಳಿಗಿರಿರಂಗನ ಬೆಟ್ಟದಿಂದ ಕೊಳ್ಳೇಗಾಲಕ್ಕೆ ಉತ್ತಮ ರಸ್ತೆ ಸಂಪರ್ಕ ಇದೆ. ಪ್ರಯಾಣಿಕರು ಹಾಗೂ ಶಾಲಾ, ಕಾಲೇಜು ಮಕ್ಕಳು  ಈ ಬಸ್ ತಂಗುದಾಣ ಆಶ್ರಯಿಸಿ ರುವುದರಿಂದ ಮಳೆಗಾಲಕ್ಕೂ ಮುನ್ನ ಬಸ್ ನಿಲ್ದಾಣ ದುರಸ್ತಿಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಸೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry