ಶಿಬಿರದಿಂದ ಮಾನವೀಯ ಮೌಲ್ಯ ವೃದ್ಧಿ

7

ಶಿಬಿರದಿಂದ ಮಾನವೀಯ ಮೌಲ್ಯ ವೃದ್ಧಿ

Published:
Updated:

ಶಿರ್ವ (ಕಟಪಾಡಿ): `ಶಿಬಿರಗಳು ಸಹಬಾಳ್ವೆ, ಸೇವಾಭಾವನೆ, ಶ್ರಮದಾನ ಜೊತೆಗೆ ಮಾನವೀಯ ಸಾಂಸ್ಕೃತಿಕ ಮೌಲ್ಯವನ್ನು ವೃದ್ಧಿಸುತ್ತವೆ~ ಎಂದು ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಕಮಲಾಕ್ಷ ಶೆಣೈ ಹೇಳಿದರು.ಶಿರ್ವ ಸೇಂಟ್ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಮೂಡುಬೆಳ್ಳೆ ಸೇಂಟ್ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ  ವಿಶೇಷ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸೇಂಟ್ ಮೇರಿ ಕಾಲೇಜಿನ ಪ್ರಾಂಶುಪಾಲ ಡಾ. ಜೆ.ಸಿ.ಮಿರಾಂಡ  ಮಾತನಾಡಿ, `ಸೇವೆ ಜತೆ ಕ್ಷಮಾಗುಣವನ್ನು ಬೆಳೆಸಿಕೊಳ್ಳಬೇಕು~ ಎಂದರು.ಶಿಬಿರಾರ್ಥಿಗಳ ಪರವಾಗಿ ರವಿಕುಮಾರ್, ವಿಜಯಾ ನಾಯಕ್, ಚೈತ್ರಾ, ಜೆನೆಟ್ ಮಾತನಾಡಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಆರ್ವಿನ್ ಡಿಸೋಜ, ಶಿಕ್ಷಕರಾದ ನವೀನ್ ಕೊರೆಯ, ಸಂತೋಷ್ ಅಮೀನ್, ಜೋಸೆಫ್ ಡಿಸೋಜ, ಜೆಸಿಂತಾ ದಾಂತಿ, ಸೀಮಾ, ಪ್ರದೀಪ್ ಕುಮಾರ್, ಸಹನಾ, ದೀಕ್ಷಾ, ಸಚ್ಚಿನ್ ಶೆಟ್ಟಿ, ಎಡ್ವರ್ಡ್ ಲಾರ್ಸನ್ ಡಿಸೋಜ ಇದ್ದರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry