ಸೋಮವಾರ, ಅಕ್ಟೋಬರ್ 21, 2019
23 °C

ಶಿರಡಿ ಸಾಯಿಬಾಬಾಗೆ ಒಂದು ವರ್ಷ

Published:
Updated:

`ಶಿರಡಿ ಸಾಯಿಬಾಬಾ~ ಚರಿತ್ರೆ ಹಾಗೂ ಮಹಿಮೆಯನ್ನು ನಿರೂಪಿಸುವಂಥ `ಶ್ರಿಶಿರಡಿ ಸಾಯಿಬಾಬಾ~ ಪೌರಾಣಿಕ ಧಾರಾವಾಹಿ ಒಂದು ವರ್ಷ ಪೂರೈಸಿದೆ. ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ 9-30ರವರೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಭಕ್ತಿಪ್ರಧಾನ ಧಾರಾವಾಹಿ 52 ವಾರ ಪೂರ್ಣಗೊಳಿಸಿದೆ.ಸಂಕೇತ್‌ಬನ್ಸಾಲಿ ನಿರ್ಮಾಣದ ಈ ಶಿರಡಿ  ಧಾರಾವಾಹಿಗೆ ಕೆ.ಪುರುಷನಾಥ್ ನಿರ್ದೇಶಕ. ಅಂಬರೀಷ್ ಸಾರಂಗಿ ಸಾಯಿಬಾಬಾ ಪಾತ್ರ ನಿರ್ವಹಿಸುತ್ತಿರುವ ನಟ. ಎಸ್.ಎಲ್.ಚಂದ್ರು ಚಿತ್ರಕಥೆ, ಸಂಭಾಷಣೆ, ಮಾರುತಿ ಮಿರಜ್‌ಕರ್ ಸಂಗೀತ, ಲಕ್ಷ್ಮಿಕಾಂತ ಪಿ.ಜಿ. ಸಂಕಲನ ಇದೆ.

ಮುಕ್ತಾಯ ಹಂತದಲ್ಲಿ `ಬ್ರೇಕಿಂಗ್ ನ್ಯೂಸ್~

ಮಾತಿನ ಭಾಗದ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿರುವ `ಬ್ರೇಕಿಂಗ್‌ನ್ಯೂಸ್~ ಚಿತ್ರಕ್ಕೆ ಬಾಕಿ ಇರುವುದು ನಾಲ್ಕು ಹಾಡುಗಳು ಮಾತ್ರ. ಇತ್ತೀಚೆಗೆ ಕ್ಲೈಮ್ಯಾಕ್ಸ್‌ಚಿತ್ರೀಕರಣವು ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆಯೊಂದಿಗೆ ಮುಗಿಯಿತು.

ಅಜಯ್, ರಾಧಿಕಾಪಂಡಿತ್, ರಂಗಾಯಣ ರಘು, ಅನಂತನಾಗ್, ಮಂಡ್ಯ ರಮೇಶ್, ಸಾಧುಕೋಕಿಲ, ಕಾಸರಗೋಡು ಚಿನ್ನ, ರೋಹಿಣಿ ರಘುನಂದನ್ ಮುಂತಾದವರ ಅಭಿನಯವಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಕೃಷ್ಣಕುಮಾರ್ ಛಾಯಾಗ್ರಹಣ ಇದೆ.

Post Comments (+)