ಶಿರಾಳಕೊಪ್ಪ: ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

7

ಶಿರಾಳಕೊಪ್ಪ: ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

Published:
Updated:

ಶಿರಾಳಕೊಪ್ಪ: ಗೊಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಾರದಿರಲು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕಾರಣ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.ಶಿರಾಳಕೊಪ್ಪ ಸಮೀಪದ ಬಸವನಂದಿಹಳ್ಳಿ ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು. ತಾಯಿ 9 ತಿಂಗಳು ಹಾಲು ಉಣಿಸಿದರೆ, ಗೋವು ಮನುಷ್ಯ ಸಾಯುವವರೆಗೂ ಹಾಲು ನೀಡುತ್ತದೆ. ಇಂಥ ಗೋವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಾಗರಿಕರ ಮೇಲಿದೆ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೆಲಸ ಕಾರ್ಯ ಸ್ಮರಿಸಿ, ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರ ಬಸವನಂದಿಹಳ್ಳಿ ಅಭಿವೃದ್ಧಿಗೆ ್ಙ  25 ಲಕ್ಷ ಅನುದಾನ ನೀಡವುದಾಗಿ ಭರವಸೆ ನೀಡಿದರು.ಅದೇ ರೀತಿ ಶಿಕಾರಿಪುರ ತಾಲ್ಲೂಕಿನ ಜನರ ಬಹುದಿನದ ಬೇಡಿಕೆಯಾದ ರೈಲು ಮಾರ್ಗವನ್ನು ಶಿವಮೊಗ್ಗ, ಸವಳಂಗ, ಶಿಕಾರಿಪುರ ಮೂಲಕ ರಾಣೇಬೆನ್ನೂರುವರೆಗೆ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗುವುದು ಎಂದು ನುಡಿದರು.ಶಿವಮೂರ್ತಿ ಮುರುಘರಾಜೆಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾ.ಪಂ. ಅಧ್ಯಕ್ಷ  ಜ್ಯೋತಿ ರಮೇಶ, ಜಿ.ಪಂ. ಸದಸ್ಯ ದಾನಿರುದ್ರಪ್ಪ, ಈಶ್ವರಪ್ಪ, ಬಂಗಾರಿನಾಯ್ಕ, `ಕಾಡಾ~ ಅಧ್ಯಕ್ಷ ಶೇಖರಪ್ಪ, ಪ.ಪಂ. ಅಧ್ಯಕ್ಷ ಎಚ್.ಎಂ. ಚಂದ್ರಶೇಖರ್, ಗುರುಮೂರ್ತಿ ಇತರರು ಉಪಸ್ಥಿತರಿದ್ದರು. ಕೆರೆ ಒತ್ತುವರಿ ತೆರವು

ಭದ್ರಾವತಿ: ತಾಲ್ಲೂಕಿನ 10 ಗ್ರಾಮಗಳ ಒಟ್ಟು 67 ಎಕರೆ ಕೆರೆ ಒತ್ತುವರಿಯನ್ನು 2012 ಫೆಬ್ರುವರಿ ತನಕ ತೆರವು ಮಾಡಲಾಗಿದೆ ಎಂದು ತಹಶೀಲ್ದಾರ್ ಬಿ. ಅಭಿಜಿನ್ ಹೇಳಿದ್ದಾರೆ.ಸರ್ಕಾರಿ ಜಮೀನು ಹಾಗೂ ಕೆರೆ ಒತ್ತುವರಿ ತೆರವು, ಜೀರ್ಣೋದ್ಧಾರ ಕಾರ್ಯಕ್ರಮ ಅಡಿ ಜಿಲ್ಲಾಧಿಕಾರಿ 2012ರ ಫೆಬ್ರುವರಿ  ತನಕ ನಿಗದಿ ಮಾಡಿದ್ದ 100 ಎಕರೆ ಗುರಿಯಲ್ಲಿ ಈ ಸಾಧನೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.ನವಿಲೆ ಬಸವಾಪುರ ಗ್ರಾಮದ ಸರ್ವೆ ನಂ.: 6ರ 3 ಎಕರೆ 15 ಗುಂಟೆ, ಸಿದ್ಲೀಪುರ ಸರ್ವೆ ನಂ: 59ರ ಅಯ್ಯನಕೆರೆಯ 28 ಎಕರೆ 25 ಗುಂಟೆ, ನಾಗತಿಬೆಳಗಲು ಸರ್ವೆ ನಂ.: 77ರ 3ಎಕರೆ 20 ಗುಂಟೆ, ಅತ್ತಿಗುಂದ ಸರ್ವೆ ನಂ.: 24ರ 2 ಎಕರೆ, ವೀರಾಪುರ ಸರ್ವೆ ನಂ 69ರ 1 ಎಕರೆ, ಕೋಮಾರನಹಳ್ಳಿ ಸರ್ವೆನಂ 61ರ 3 ಎಕರೆ, ತಳ್ಳಿಕಟ್ಟೆ ಸರ್ವೆ ನಂ.: 26ರ 8 ಎಕರೆ 10 ಗುಂಟೆ, ಯರೇಹಳ್ಳಿ ಸರ್ವೆ ನಂ.: 9ರ 13ಎಕರೆ, ಅರಳಿಹಳ್ಳಿ ಸರ್ವೆ ನಂ.: 54ರ 1ಎಕರೆ, ದೇವರನರಸೀಪುರ ಸರ್ವೆ ನಂ.: 121ರ 3ಎಕರೆ ಪ್ರದೇಶದ ಒತ್ತುವರಿ ತೆರವು ಮಾಡಲಾಗಿದೆ.ಇದರಲ್ಲಿ ನಾಗತಿಬೆಳಗಲು ಕೆರೆಗೆ ್ಙ 2.88 ಲಕ್ಷ, ಕೋಮಾರನಹಳ್ಳಿ ಕೆರೆಗೆ ್ಙ  7.53 ಲಕ್ಷ, ತಳ್ಳಿಕೆಟ್ಟೆ ಕೆರೆಗ್ಙೆ  2.88 ಲಕ್ಷ, ಯರೇಹಳ್ಳಿ ಕೆರೆಗ್ಙೆ 2.13 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry