ಶಿರ್ವದಲ್ಲಿ ಅಂತ್ಯಕ್ರಿಯೆ?

7

ಶಿರ್ವದಲ್ಲಿ ಅಂತ್ಯಕ್ರಿಯೆ?

Published:
Updated:

ಶಿರ್ವ: ಲಂಡನ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನರ್ಸ್ ಜೆಸಿಂತಾ ಅವರ ಮೃತದೇಹಕ್ಕಾಗಿ ಶಿರ್ವ ಸೊರ್ಕಳದಲ್ಲಿ ಗಂಡನ ಮನೆಯವರು ದುಃಖತಪ್ತರಾಗಿ ಕಾಯುತ್ತಾ ಕುಳಿತಿದ್ದಾರೆ. ಅಂತ್ಯಸಂಸ್ಕಾರವನ್ನು ಶಿರ್ವದಲ್ಲಿ ನಡೆಸಲು ಕುಟುಂಬ ವರ್ಗ ಉದ್ದೇಶಿಸಿದ್ದು, ಪಾರ್ಥಿವ ಶರೀರವನ್ನು ಲಂಡನ್‌ನಿಂದ ಭಾರತಕ್ಕೆ ಶೀಘ್ರ ತರಲು ಸಹಕರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.ಜೆಸಿಂತಾಗೆ ಯಾವುದೇ ರೀತಿಯಲ್ಲಿ ಕೌಟುಂಬಿಕ ಅಥವಾ ಹಣಕಾಸಿನ ತೊಂದರೆಗಳಿರಲಿಲ್ಲ. ಈ ದಂಪತಿ ದಾನಧರ್ಮಗಳಲ್ಲಿ ಕೂಡಾ ಎತ್ತಿದ ಕೈ. ಅದಕ್ಕೆ ಸಾಕ್ಷಿಯಾಗಿ ಶಿರ್ವ ಪರಿಸರದ ಸ್ಥಳೀಯ ಧಾರ್ಮಿಕ ಕೇಂದ್ರಗಳಿಗೆ ಹಾಗೂ ವಿದ್ಯಾಕೇಂದ್ರಗಳಿಗೆ ಹಣದ ನೆರವು ಕೊಟ್ಟಿದ್ದರು ಎಂಬುದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.ಮಾತಿಲ್ಲ: ಅಳು ಮಾತ್ರ: ಪತ್ನಿ ಜೆಸಿಂತಾರ ಸಾವಿನ ಬಳಿಕ ಪತಿ ಬೆನೆಡಿಕ್ಟ್ ಬರ್ಬೊಜಾ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕುಟುಂಬದವರಿಗೆ ಕರೆ ಮಾಡಿದಾಗ ಮಾತು ಬಾರದೆ ಬರೇ ಅಳುತ್ತಾರೆ. ಮಕ್ಕಳಾದ ಜುನಾಲ್ (16) ಮತ್ತು ಮಗಳು ಲೀಶಾ (14) ಕೂಡಾ ಗಾಬರಿಗೊಂಡಿದ್ದಾರೆ ಎಂದು ತಾಯಿ ಕಾರ್ಮಿನ್ ಬರ್ಬೋಜಾ ತಿಳಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry