ಶಿರ್ವ ವಿಷ್ಣುಮೂರ್ತಿ ದೇವಸ್ಥಾನ: ಧ್ವಜಸ್ತಂಬ ಸ್ಥಾಪನೆ

7

ಶಿರ್ವ ವಿಷ್ಣುಮೂರ್ತಿ ದೇವಸ್ಥಾನ: ಧ್ವಜಸ್ತಂಬ ಸ್ಥಾಪನೆ

Published:
Updated:

ಶಿರ್ವ(ಕಟಪಾಡಿ): ಸಮಗ್ರ ಜೀರ್ಣೋದ್ಧಾರದೊಂದಿಗೆ ಪುನಃ: ಪ್ರತಿಷ್ಠೆ-ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಮಹತೋಭಾರ ಶಿರ್ವ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇತ್ತೀಚೆಗೆ ನೂತನ ಧ್ವಜಸ್ತಂಬವನ್ನು ಸ್ಥಾಪಿಸಲಾಯಿತು.ಧ್ವಜಸ್ತಂಬ ಪ್ರತಿಷ್ಠಾ ಪೂರ್ವಭಾವಿಯಾಗಿ ದೇರೆಬೈಲು ಹರಿಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ತಂತ್ರಿಗಳಾದ ಸಗ್ರಿ ಹರಿದಾಸ್ ಐತಾಳ್, ಅರ್ಚಕರಾದ ರಘುಪತಿ ಭಟ್ ಮತ್ತು ಶ್ರಿನಿವಾಸ ಭಟ್ ನೇತೃತ್ವದಲ್ಲಿ ಸಮಕ್ಷಮ, ಧಾರ್ಮಿಕ ವಿಧ ನಡೆಯಿತು. ಸುಮಾರು 60 ಅಡಿ ಎತ್ತರದ ಸಾಗುವಾನಿ ಮರವನ್ನು ಧ್ವಜಸ್ತಂಭವಾಗಿ ಬಳಸಲಾಗಿದೆ. ಮರವನ್ನು ಶಿರ್ವದ ಉದ್ಯಮಿ ಕುಶ ಶೆಟ್ಟಿಯವರು ಒದಗಿಸಿದ್ದಾರೆ.ದೇವಸ್ಥಾನದ ಮೊಕ್ತೇಸರರಾದ ಶಿರ್ವ ನಡಿಬೆಟ್ಟು ಶಂಕರ ಹೆಗ್ಡೆ, ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಶಿರ್ವ ನಡಿಬೆಟ್ಟು ರತ್ನವರ್ಮ ಹೆಗ್ಡೆ, ಉಪಾಧ್ಯಕ್ಷರಾದ ಗಣೇಶ್ ಕಾಮತ್, ಎಸ್. ಕೆ. ಸಾಲಿಯಾನ್, ವಿ. ಸುಬ್ಬಯ್ಯ ಹೆಗ್ಡೆ, ತಮ್ಮಣ್ಣ ಪೂಜಾರಿ, ಶಿರ್ವ ಕುಟ್ಟಿ ಶೆಟ್ಟಿ, ನವೀಕರಣ ಸಮಿತಿಯ ಪ್ರಮುಖರಾದ ಸಚ್ಚಿದಾನಂದ ಹೆಗ್ಡೆ, ಶೇಖರ ಶೆಟ್ಟಿ, ಸುಂದರ ಶೆಟ್ಟಿ, ವಿಠಲ ಅಂಚನ್, ವೆಂಕಟೇಶ್ ಫ್ರಭು, ಸುರೇಶ್ ನಾಯಕ್, ಜಗದೀಶ್ ಅರಸ್, ಎಂಜಿನಿಯರ್ ಪ್ರಸಾದ್ ಶೆಟ್ಟಿ, ಶಿಲ್ಪಿ ಕುಪ್ಪುಸ್ವಾಮಿ, ನಾರಾಯಣ ಆಚಾರ್ ಮೊದಲಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry