ಶಿಲುಬೆ ಕೆಳಗೆ ಹಾರಿದ ಧ್ವಜ
ಪುತ್ತೂರು: ತಾಲ್ಲೂಕಿನ ಪರ್ಲಡ್ಕದ ಮಲಂಕರ ಕ್ಯಾಥೋಲಿಕ್ ಚರ್ಚ್ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಧ್ವಜಾರೋಹಣದಲ್ಲಿ ಶಿಲುಬೆ ಸ್ತಂಭದಲ್ಲಿ ಶಿಲುಬೆಯ ಕೆಳ ಭಾಗ ಧ್ವಜಾರೋಹಣ ನಡೆಸಿದ ಘಟನೆ ನಡೆದಿದೆ.
ಮಲಂಕರ ಕ್ಯಾಥೋಲಿಕ್ ಚರ್ಚ್ನ ಪುತ್ತೂರು ವಲಯ ಧರ್ಮಾಧ್ಯಕ್ಷ ವಿನ್ಸೆಂಟ್ ಅವರ ಪರ್ಲಡ್ಕದ ಶಾಂತಿ ಭವನ ವಠಾರದಲ್ಲಿದ್ದ ಶಿಲುಬೆ ಸ್ತಂಭಕ್ಕೆ ಧ್ವಜ ಏರಿಸಿ ಶಿಲುಬೆಯ ಕೆಳಗೆ ಧ್ವಜ ಹಾರಿಸಲಾಗಿದೆ.
ಪತ್ರಕರ್ತರೊಬ್ಬರು ಇದನ್ನು ಗಮನಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಪುತ್ತೂರು ತಹಶೀಲ್ದಾರ್ ಕುಳ್ಳೇಗೌಡ, ನಗರ ಠಾಣಾಧಿಕಾರಿ ಸುದರ್ಶನ್ ಸ್ಥಳಕ್ಕೆ ಭೇಟಿ ನೀಡಿ, ಶಿಲುಬೆ ಸ್ತಂಭಕ್ಕೆ ಏರಿಸಿದ್ದ ಧ್ವಜವನ್ನು ಶಿಲುಬೆ ಸಹಿತ ತೆರವು ಮಾಡಿದರು.
`ನಾನು ಉದ್ದೇಶಪೂರ್ವಕ ಈ ರೀತಿ ಮಾಡಿಲ್ಲ. ಅರಿಯದೇ ಮಾಡಿದ್ದೇನೆ~ ಎಂದು ವಿನ್ಸೆಂಟ್ ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ಕುರಿತು ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.