ಸೋಮವಾರ, ಡಿಸೆಂಬರ್ 16, 2019
17 °C
ಪಂಚರಂಗಿ

ಶಿಲ್ಪಾ ಶೆಟ್ಟಿ ಈಗ ವಸ್ತ್ರ ವಿನ್ಯಾಸಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಶಿಲ್ಪಾ ಶೆಟ್ಟಿ ಈಗ ವಸ್ತ್ರ ವಿನ್ಯಾಸಕಿ. ಆಶ್ಚರ್ಯವಾದರೂ ಇದು ಸತ್ಯ. ರಾಜ್ ಕುಂದ್ರಾ ಜತೆಗಿನ ಮದುವೆ ಹಾಗೂ ಪುತ್ರೋತ್ಸವದ ನಂತರ ಬಾಲಿವುಡ್‌ನ ಈ ಬೆಡಗಿ ತಮ್ಮದೇ ರಾಜಸ್ತಾನ್ ರಾಯಲ್ಸ್ ಐಪಿಎಲ್ ತಂಡದ ಅಭಿಮಾನಿಗಳಿಗಾಗಿ ಅಧಿಕೃತ ಫ್ಯಾನ್ ವೇರ್ ಸಂಗ್ರಹಗಳನ್ನು ತಾವೇ ವಿನ್ಯಾಸ ಮಾಡಿದ್ದಾರೆ.`ಪ್ರವೋಗ್' ಜತೆಗೂಡಿ ವಿನ್ಯಾಸ ಮಾಡಲಾಗಿರುವ ಈ ವಸ್ತ್ರಗಳನ್ನು ಇತ್ತೀಚೆಗೆ ಸ್ವತಃ ತಾವೇ ಧರಿಸಿ ರ‌್ಯಾಂಪ್ ಏರಿ, ಶಿಲ್ಪಾ ಪ್ರದರ್ಶಿಸಿದರು. ಐಪಿಎಲ್‌ನ ಆರನೇ ಆವೃತ್ತಿಗೆ ವಿಧ್ಯುಕ್ತ ಚಾಲನೆ ದೊರೆತ ಹಿನ್ನೆಲೆಯಲ್ಲಿ ನಟಿ, ವಿನ್ಯಾಸಕಿ ಶಿಲ್ಪಾ ಶೆಟ್ಟಿ ತಮ್ಮ ವಸ್ತ್ರಗಳ ಕುರಿತು `ಈ ಸಂಗ್ರಹಗಳು ಅತ್ಯಂತ ಜಾಗರೂಕತೆಯಿಂದ ವಿನ್ಯಾಸ ಮಾಡಿದಂಥವು.ಯುವ ಜನಾಂಗಕ್ಕೆ ಇಷ್ಟವಾಗುವ ಇವು ಹೆಚ್ಚು ಆರಾಮದಾಯಕ. ಮತ್ತೆ ಮತ್ತೆ ಇವನ್ನು ತೊಡಬೇಕೆನಿಸುತ್ತದೆ. ಲೈನಿನ್ ಶರ್ಟ್‌ಗಳು, ನೀಲಿ ಹಾಗೂ ಹಸಿರು ಬಣ್ಣಗಳನ್ನೊಳಗೊಂಡ ಬಗೆಬಗೆಯ ವಿನ್ಯಾಸದ ಪೊಲೊ ಟಿ-ಶರ್ಟ್‌ಗಳು ಇದರಲ್ಲಿ ಸೇರಿವೆ' ಎಂದು ಅವರು ತಿಳಿಸಿದ್ದಾರೆ.ಶಿಲ್ಪಾ ಶೆಟ್ಟಿ ವಿನ್ಯಾಸದ ಈ ವಸ್ತ್ರಗಳನ್ನು ರಾಜಸ್ತಾನ್ ರಾಯಲ್ಸ್ ತಂಡದ ರಾಹುಲ್ ದ್ರಾವಿಡ್, ಅಜಿಂಕ್ಯಾ ರಹಾನೆ, ಶಾನ್ ಟೈಟ್, ಬ್ರಾಡ್ ಹಾಗ್, ಕೆವೊನ್ ಕೂಪರ್ ಮುಂತಾದವರು ತೊಟ್ಟು ರ‌್ಯಾಂಪ್ ತುಳಿದರು. ಅಂತಿಮವಾಗಿ ಶೋ ಸ್ಟಾಪರ್ ಹಾಗೂ ವಿನ್ಯಾಸಕಿ ಎರಡೂ ಪಾತ್ರಗಳನ್ನು ಶಿಲ್ಪಾ ಒಬ್ಬರೇ ನಿಭಾಯಿಸಿ ಗಮನ ಸೆಳೆದರು.

ಪ್ರತಿಕ್ರಿಯಿಸಿ (+)