ಸೋಮವಾರ, ಜೂನ್ 14, 2021
27 °C

ಶಿಲ್ಲಾಂಗ್‌ಗೆ ಮಣಿದ ಬಿಎಫ್‌ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಲ್ಲಾಂಗ್‌ (ಪಿಟಿಐ): ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶಿಲ್ಲಾಂಗ್‌ ಲಜಾಂಗ್‌ ಎದುರು ಆಘಾತ ಅನುಭವಿಸಿದ್ದಾರೆ.ಜವಾಹರ್‌ ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶಿಲ್ಲಾಂಗ್‌ 3–0 ಗೋಲುಗಳಿಂದ ಬಿಎಫ್‌ಸಿ ತಂಡ ವನ್ನು ಮಣಿಸಿತು. ಆದರೆ ಪಾಯಿಂ ಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಿಎಫ್‌ಸಿ ತಂಡಕ್ಕೆ ಈ ಸೋಲಿನಿಂದ ಯಾವುದೇ ಅಪಾಯ ಇಲ್ಲ.14 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಬೆಂಬಲ ಪಡೆದ ಶಿಲ್ಲಾಂಗ್‌ ತಂಡದ ಯುಲಿಯಮ್ಸ್‌ ಬಾಲ್ಫಿನ್‌ ದ್ವಿತೀ ಯಾರ್ಧದ ಮೊದಲ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಇನ್ನುಳಿದ ಎರಡು ಗೋಲುಗಳನ್ನು ಕಾರ್ನೆಲ್‌ ಗ್ಲೆನ್‌ ಗಳಿಸಿದರು. ಈ ಗೆಲುವಿನಿಂದ ಶಿಲ್ಲಾಂಗ್‌ ತಂಡಕ್ಕೆ ಮೂರು ಪಾಯಿಂಟ್‌ಗಳು ಲಭಿಸಿದವು.ಒಟ್ಟು 20 ಪಂದ್ಯ ಆಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡ 37 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಸಾಲಗಾಂವ್ಕರ್‌ (34 ಪಾಯಿಂಟ್‌) ತಂಡವಿದೆ. 29 ಪಾಯಿಂಟ್‌ ಹೊಂದಿರುವ ಶಿಲ್ಲಾಂಗ್‌ ತಂಡ ಐದನೇ ಸ್ಥಾನದಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.