ಶಿಲ್ಲಿಂಗ್‌ಫೋರ್ಡ್‌ಗೆ ಮತ್ತೆ ಆಡಲು ಅವಕಾಶ

ಮಂಗಳವಾರ, ಜೂಲೈ 23, 2019
20 °C

ಶಿಲ್ಲಿಂಗ್‌ಫೋರ್ಡ್‌ಗೆ ಮತ್ತೆ ಆಡಲು ಅವಕಾಶ

Published:
Updated:

ಸೇಂಟ್ ಜಾನ್ಸ್, ಆ್ಯಂಟಿಗುವಾ (ಪಿಟಿಐ): ಅನುಮಾನಾಸ್ಪದ ಬೌಲಿಂಗ್ ಶೈಲಿ ಹೊಂದಿದ್ದಾರೆ ಎನ್ನುವ ದೂರು ಎದುರಿಸಿದ್ದ ವೆಸ್ಟ್ ಇಂಡೀಸ್ ಆಫ್ ಸ್ಪಿನ್ ಬೌಲರ್ ಶೇನ್ ಶಿಲ್ಲಿಂಗ್  ಫೋರ್ಡ್ ಅವರಿಗೆ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಹಸಿರು ನಿಶಾನೆ ಸಿಕ್ಕಿದೆ.ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ದೇಹ ಚಲನಾ ಶಾಸ್ತ್ರ ವಿಭಾಗದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಶಿಲ್ಲಿಂಗ್‌ಫೋರ್ಡ್ ಅವರ ಶೈಲಿಯು ನಿಯಮ ಬಾಹಿರವಾದದ್ದಲ್ಲ ಎನ್ನುವುದು ಸ್ಪಷ್ಟವಾಗಿದೆ.ಬಾರ್ಬಡಾಸ್‌ನ ಉನ್ನತ ಪ್ರದರ್ಶನ ಕೇಂದ್ರದಲ್ಲಿ ತಮ್ಮ ಬೌಲಿಂಗ್ ಶೈಲಿಯನ್ನು ತಿದ್ದಿಕೊಳ್ಳಲು ಸುಮಾರು ಒಂದು ತಿಂಗಳ ಕಾಲ ಶ್ರಮವಹಿಸಿದ್ದ ವಿಂಡೀಸ್ ಸ್ಪಿನ್ನರ್ ಚೆಂಡನ್ನು ಎಸೆಯುವ ರೀತಿ ಈಗ ಸರಿಯಾಗಿದೆ ಎನ್ನುವ ವರದಿ ಬಂದಿದೆ. ಆದ್ದರಿಂದ ಅವರಿಗೆ ಮತ್ತೆ ಆಡಲು ಅವಕಾಶದ ಬಾಗಿಲು ತೆರೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry