ಶಿವನ ಆರಾಧನೆ ಸಂಭ್ರಮ; ವಿಶೇಷ ಪೂಜೆ

7

ಶಿವನ ಆರಾಧನೆ ಸಂಭ್ರಮ; ವಿಶೇಷ ಪೂಜೆ

Published:
Updated:

ಚಿಕ್ಕಮಗಳೂರು: ಜಿಲ್ಲೆಯಲ್ಲಿ  ಶಿವರಾತ್ರಿಯನ್ನು ಭಕ್ತರು ಸೋಮವಾರ  ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಬಹುತೇಕ ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಸಡ ಗರ, ಸಂಭ್ರಮ ಮನೆ ಮಾಡಿತ್ತು. ಶಿವನ ಆರಾಧನೆ ಗಳು ಆರಂಭಗೊಂಡಿದ್ದವು. ಉಪವಾಸವಿದ್ದ ಭಕ್ತರು  ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿ ದ್ದುದು  ಎಲ್ಲೆಡೆ ಕಂಡು ಬಂತು.ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾ ಲಯದಲ್ಲಿ ವಿಶೇಷ ಪೂಜೆ, ಹೋಮ, ಹವನಗಳು, ಅರ್ಚನೆ, ಅಭಿಷೇಕಗಳು ಜರುಗಿದವು. ಓಂಕಾರೇಶ್ವರ ದೇವಾಲಯ, ರಾಮನಹಳ್ಳಿಯ ರಾಮೇಶ್ವರ ದೇವಾಲಯ, ಕೋಟೆ ಶಿವದೇವಾಲಯ, ಖಾಂಡ್ಯದ ಮಾರ್ಕೇಂ ಡೇಶ್ವರ ದೇವಾಲಯ, ತೋರಣಮಾವು ಗ್ರಾಮದ ಭೈರೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.ಮುಜರಾಯಿ ಮಂಡಳಿ ಅಧ್ಯಕ್ಷ ಕೃಷ್ಣಯ್ಯಶೆಟ್ಟಿ ನೀಡಿದ್ದ ಗಂಗಾಜಲವನ್ನು ದೇವಾಲಯಗಳಲ್ಲಿ ಅಭಿಷೇಕ ಮಾಡಲಾಯಿತು.   ಉಪವಾಸ ನಿರತ ಭಕ್ತರು ಸಂಜೆ ವೇಳೆ ವಿಶೇಷ ಪೂಜೆ ಸಲ್ಲಿಸಿದರು. ಶಿವನಾಮ ಸ್ಮರಣೆ ಮಾಡಿದರು. ಸತ್ಸಂಗದಲ್ಲಿ ಪಾಲ್ಗೊಂಡರು. ಸಂಗ ಮೇಶ್ವರಪೇಟೆ ಮತ್ತು ಬೈರನಮಕ್ಕಿ ಸೇರಿದಂತೆ ಹಲವು  ಗ್ರಾಮ ಗಳಲ್ಲಿ ನಾಟಕ ಪ್ರದರ್ಶನ ಮತ್ತು ಗಾಯನ, ನೃತ್ಯ ಕಾರ್ಯಕ್ರಮಗಳು ನಡೆದವು.ಮಹಾಶಿವರಾತ್ರಿ ಅಂಗವಾಗಿ ಹೂವು ಮತ್ತು ಹಣ್ಣಿನ ಬೆಲೆಗಳು ಅಧಿಕಗೊಂಡಿದ್ದವು. ಆದರೂ ಗ್ರಾಹಕರು ಮಾರುಕಟ್ಟೆಯಲ್ಲಿ ಚೌಕಾಸಿ ಮಾಡಿ ಖರೀದಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಈಶ್ವರೀಯ ವಿದ್ಯಾಲಯ: ಚಿಕ್ಕಮಗಳೂರಿನ ಪ್ರಜಾಪಿತ ಬ್ರಹ್ಮ ಕುಮಾರೀಶ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಶಿವರಾತ್ರಿ ಅಂಗವಾಗಿ ನಗರಸಭೆ ಅಧ್ಯಕ್ಷ ಪ್ರೇಮ್ ಕುಮಾರ್, ಜಯ ಬಸವಾನಂದ ಸ್ವಾಮೀಜಿ, ಧೀರಾನಂದ ಸ್ವಾಮೀಜಿ, ಸಾನ್ನಿಧ್ಯದಲ್ಲಿ ಶಿವಧ್ವಜಾರೋಹಣ ನೆರವೇರಿಸಲಾಯಿತು.ವಿದ್ಯಾಲಯದ ಬಿ.ಕೆ.ಭಾರತೀಜಿ ಶಿವಸಂದೇಶ ಸಾರಿದರು. ಶಿವ ಎಂದರೆ ಶುಭ, ಮಂಗಳ, ಕಲ್ಯಾಣ ಎಂದರ್ಥ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಿ.ಜಯರಾಮ ನೆಲ್ಲಿ ತ್ತಾಯ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಹುಲಿಯಪ್ಪ ಗೌಡ ಮಾತನಾಡಿದರು.ಬಿ.ಕೆ.ಭಾಗ್ಯ, ಬಿ.ಕೆ.ದಯಾನಂದ, ಬಿ.ಕೆ. ಯಶೋಧ, ನಾಗರಾಜ, ಇದ್ದರು. ಬೋಳ ರಾಮೇಶ್ವರ ದೇವಾಲಯದ ಆವರಣದಲ್ಲಿ ಶಿವ ಅವತರಣೆಯ ಆಧ್ಯಾತ್ಮಿಕ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry