ಶಿವಮೊಗ್ಗ ಬಳಿ ಅಪಘಾತ, ಬೆಂಗಳೂರಿನ ಮೂವರ ಸಾವು

ಮಂಗಳವಾರ, ಜೂಲೈ 16, 2019
25 °C

ಶಿವಮೊಗ್ಗ ಬಳಿ ಅಪಘಾತ, ಬೆಂಗಳೂರಿನ ಮೂವರ ಸಾವು

Published:
Updated:

ಶಿವಮೊಗ್ಗ: ಖಾಸಗಿ ಬಸ್‌ಗೆ ಟೆಂಪೋ ಟ್ರ್ಯಾಕ್ಸ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಟ್ರ್ಯಾಕ್ಸ್‌ನಲ್ಲಿದ್ದ ಮೂವರು ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಗರದ ಹೊರವಲಯದಲ್ಲಿ ಶನಿವಾರ ಮುಂಜಾನೆ   ನಡೆದಿದೆ.ಶಾಂತಮ್ಮ (35) ಎಂಬುವವರು ಸ್ಥಳದಲ್ಲೇ ಮತ್ತು ನಾರಾಯಣ (53) ಹಾಗೂ ಅಮ್ಮಯಮ್ಮ (70) ಎಂಬುವವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಇವರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಸಮೀಪದ ಯಮಲೂರು ಬಡಾವಣೆ ನಿವಾಸಿಗಳು. ಎಲ್ಲರೂ ಸಂಬಂಧಿಕರು. ಇವರೆಲ್ಲ ಸಾಗರ ಸಮೀಪದ ಸಿಗಂದೂರು ದೇವಾಲಯಕ್ಕೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಶಿವಮೊಗ್ಗ - ಭದ್ರಾವತಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಎರಡೂ ವಾಹನಗಳು ಬೆಂಗಳೂರು ಕಡೆಯಿಂದ ಬರುತ್ತಿದ್ದವು., ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಅದಕ್ಕೆ  ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರ್ಯಾಕ್ಸ್ ಡಿಕ್ಕಿ ಹೊಡೆದಿದೆ.ಗಾಯಾಳುಗಳಾದ ಅಮರಾವತಿ (40), ಲಕ್ಷ್ಮಮ್ಮ (70), ಗೌರಮ್ಮ (30), ಧನಲಕ್ಷ್ಮೀ (55), ಕಲಾವತಿ (30), ಗೀತಾ  (28), ಲಕ್ಷ್ಮಮ್ಮ (45), ಸುಹಾಸ್ (6), ನಿಖಿತಾ (10), ಮೇಘನಾ (12) ಹಾಗೂ ಟೆಂಪೋ ಟ್ರ್ಯಾಕ್ಸ್ ಚಾಲಕ ಮುನಿರಾಜು (29) ಅವರನ್ನು ಮೆಗ್ಗಾನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry