ಶಿವರಾತ್ರಿ: ಇಂದಿನಿಂದ ಪೂಜೆ

7

ಶಿವರಾತ್ರಿ: ಇಂದಿನಿಂದ ಪೂಜೆ

Published:
Updated:

ಕಾರವಾರ: ಕುಮಟಾ ತಾಲ್ಲೂಕಿನ ಗೋಕರ್ಣ ಮಹಾಬಲೇಶ್ವರ ದೇವ ಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಫೆ. 15 (ಬುಧವಾರ)ರಿಂದ 23ರ ವರೆಗೆ ಮಹಾಬಲೇಶ್ವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.ಬುಧವಾರ (ಫೆ. 15) ಗಣೇಶ ಪೂಜೆ, ಧ್ವಜಾರೋಹಣ, ಮೃತ್ತಿಕಾ ಹರಣ ಮಹೋತ್ಸವ, ಭೂತಬಲಿ. ಫೆ. 16ರಂದು ಸ್ಥಾನಶುದ್ಧಿ ಹವನಾನು ಷ್ಠಾನ, ಗಜವಾಹನ ಯಂತ್ರೋತ್ಸವ, ಭೂತಬಲಿ. ಫೆ. 17ರಂದು ಕಲಾಶಕ್ತ್ಯಾ ದಿಹವನ, ಹಂಸವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ. ಫೆ. 18ರಂದು ಸಿಂಹವಾಹನ ಯಂತ್ರೋತ್ಸವ, ಪುಷ್ಪ ರಥೋತ್ಸವ.ಫೆ. 19ರಂದು ಮಯೂರ ಮಂತ್ರೋತ್ಸವ, ಪುಷ್ಪರಥೋತ್ಸವ.  ಫೆ. 20ರಂದು, ಶಿವರಾತ್ರಿಯಂದು ಮಹಾಕುಂಬಾಭಿಷೇಕಪೂರ್ವಕ ಪಂಚಾಮೃತ ಅಭಿಷೇಕ, ಪುಷ್ಪ ರಥೋತ್ಸವ, ಜಲಯಾನೋತ್ಸವ, ದೀಪೋತ್ಸವ ನಡೆಯಲಿದೆ.ಫೆ. 21 ಪರಿವಾರ ಹವನ, ವೃಷಭ ವಾಹನಯಂತ್ರೋತ್ಸವ, ಪುಷ್ಪ ರಥೋತ್ಸವ, ಫೆ. 22ರಂದು ಶಾಂತಿ ಘಟಾದ್ಯಭಿಷೇಕ, ದಂಡಬಲಿ, ಭೂತ ಬಲಿ, ಗ್ರಾಮಬಲಿ, ಮಹಾ ರಥೋತ್ಸವ ಮತ್ತು ಫೆ. 23ರಂದು ಚೂರ್ಣೋ ತ್ಸವ, ಅವಭೃತ, ಚೂರ್ಣ ಬಲಿ, ಜಲಯಾನೋತ್ಸವ, ದೀಪೋತ್ಸವ, ಅಂಕುರಪ್ರಸಾದ ವಿತರಣೆ ಕಾರ್ಯ ಕ್ರಮ ಜರುಗಲಿದೆ.ಮಹಾಶಿವರಾತ್ರಿಯ ಅಂಗವಾಗಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಸಂಜೆ 6ರಿಂದ 9ರ ವರೆಗೆ `ಶ್ರೀರಾಮಕಥಾ~ ಗಂಗಾವತರಣ- ಪಾರ್ವತಿಕಲ್ಯಾಣದ ಪುನರವತರಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರತಿನಿತ್ಯ ರಾತ್ರ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ತರಬೇತಿ ಕೇಂದ್ರ ಆರಂಭಶಿರಸಿ:
ಇಲ್ಲಿನ ಲೋಕಮಿತ್ರ ಫೌಂಡೇಶ ನ್‌ನ ಉನ್ನತಿ ಕೇಂದ್ರದಲ್ಲಿ ಉಚಿತ ತರಬೇತಿ ಪಡೆದ ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ 10ನೇ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ ಇದೇ 15ರ ಮಧ್ಯಾಹ್ನ 3 ಗಂಟೆಗೆ ಉನ್ನತಿ ವೃತ್ತಿ ತರಬೇತಿ ಕೇಂದ್ರದಲ್ಲಿ ಏರ್ಪಾಟಾಗಿದೆ. ಲೋಕ ಮಿತ್ರ ಫೌಂಡೇಶನ್ ಅಧ್ಯಕ್ಷ ರಾಮ ಕಿಣಿ ಅಧ್ಯಕ್ಷತೆ ವಹಿಸುವರು. ವಿ.ಎಸ್. ಸೋಂದೆ  ಇತರರು ಭಾಗವಹಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry