ಶಿವರಾತ್ರಿ: 17ರಿಂದ ಹಿಮಲಿಂಗ ದರ್ಶನ

7

ಶಿವರಾತ್ರಿ: 17ರಿಂದ ಹಿಮಲಿಂಗ ದರ್ಶನ

Published:
Updated:

ಬೆಂಗಳೂರು: ಶಿವರಾತ್ರಿಯ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನಗರದ ಹೆಬ್ಬಾಳದ ಸುಮಂಗಲಿ ಸೇವಾಶ್ರಮದಲ್ಲಿ ಇದೇ 17 ರಿಂದ 21 ರವರೆಗೆ ಹಿಮಲಿಂಗ ದರ್ಶನವನ್ನು ಆಯೋಜಿಸಿದೆ.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಈಶ್ವರೀಯ ವಿಶ್ವವಿದ್ಯಾಲಯದ ಪ್ರಾದೇಶಿಕ ಸಮನ್ವಯಕಾರ ಬಿ.ಕೆ.ಸುರೇಂದ್ರ, `ಅಮರನಾಥದ ಹಿಮಲಿಂಗವನ್ನು ಹೋಲುವ ಸುಮಾರು 11 ಅಡಿಯ ಹಿಮಲಿಂಗದ ಪ್ರತಿಕೃತಿ ಹಾಗೂ ದ್ವಾದಶ ಲಿಂಗಗಳ ದರ್ಶನ ಸಾರ್ವಜನಿಕರಿಗೆ ದೊರೆಯಲಿದೆ. ಶಿವರಾತ್ರಿಯ ಜಾಗರಣೆಯ ವಿಶೇಷವನ್ನು ತಿಳಿಸುವ `ಕುಂಭಕರ್ಣ~ ಹೆಸರಿನ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ~ ಎಂದರು.ಫೆ.17 ರಂದು ಸಂಜೆ 5.30 ಕ್ಕೆ ಬೇಲಿಮಠದ ಶಿವರುದ್ರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮತ್ತಿತರರು ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry