ಶಿವಶಂಕರ್ ಬೆಳ್ಳಿಹೆಜ್ಜೆ

7

ಶಿವಶಂಕರ್ ಬೆಳ್ಳಿಹೆಜ್ಜೆ

Published:
Updated:

ಕರ್ನಾಟಕ ಚಲನಚಿತ್ರ ಅಕಾಡೆಮಿ: ಶನಿವಾರ ಬೆಳ್ಳಿಹೆಜ್ಜೆಯಲ್ಲಿ ಚಿತ್ರ ಸಾಹಿತಿ- ನಿರ್ದೇಶಕ ಶಿವಶಂಕರ್ ಅವರೊಂದಿಗೆ ಸಂವಾದ ಎಳೆ ವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ಅಭಿನಯಿಸುವ ಹಂಬಲವಿಟ್ಟುಕೊಂಡ ಸಿ.ವಿ.ಶಿವಶಂಕರ್ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಮೂಲಕ ರಂಗಪ್ರವೇಶ ಪಡೆದರು. ನಾಟಕಗಳಲ್ಲಿ ಅಭಿನಯಿಸುತ್ತಾ ಚಲನಚಿತ್ರಗಳಲ್ಲಿ ಅವಕಾಶ ಪಡೆಯಲು ಮದ್ರಾಸ್‌ಗೆ ಹೋಗಿ ಅಲ್ಲಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡುತ್ತಿದ್ದರು.ರತ್ನಗಿರಿ ರಹಸ್ಯ ಇವರ ಅಭಿನಯದ ಮೊದಲ ಚಿತ್ರ. ನಂತರ ಚಿತ್ರದಲ್ಲಿ ಇವರಿಗೆ ಅಭಿನಯಿಸುವ ಮೊದಲ ಅವಕಾಶ ದೊರೆಯಿತು. ನಂತರ ಚಿತ್ರಗಳಲ್ಲಿ ನಟಿಸುತ್ತಲೇ ಹುಣಸೂರು ಕೃಷ್ಣಮೂರ್ತಿ, ವಿಠಲಾಚಾರ್ಯ, ಜಿ.ವಿ.ಅಯ್ಯರ್ ಮುಂತಾದವರ ಸಹ ನಿರ್ದೇಶಕರಾಗಿ ಕೆಲಸ ಮಾಡಿ, ಸ್ವತಂತ್ರ ನಿರ್ದೇಶಕರಾಗಿದ್ದು ‘ಮನೆ ಕಟ್ಟಿ ನೋಡು’ ಚಿತ್ರದ ಮೂಲಕ. ನಮ್ಮ ಊರು, ಮಹಡಿ ಮನೆ, ಮಹಾತಪಸ್ವಿ ಮುಂತಾದವು ಅವರಿಗೆ ಖ್ಯಾತಿ ತಂದ ಚಿತ್ರಗಳು. ನಾಡು ನುಡಿ ಕನ್ನಡಾಭಿಮಾನ ಬೆಳೆಸುವ ಅವರ ಚಿತ್ರಗೀತೆಗಳು ಬಹಳ ಜನಪ್ರಿಯ. ಸ್ಥಳ; ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್. ಸಂಜೆ 4.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry