ಸೋಮವಾರ, ನವೆಂಬರ್ 18, 2019
27 °C

ಶಿವಶಾಂತವೀರರ ಸ್ಮರಣೋತ್ಸವ: ಪಾದಯಾತ್ರೆ

Published:
Updated:
ಶಿವಶಾಂತವೀರರ ಸ್ಮರಣೋತ್ಸವ: ಪಾದಯಾತ್ರೆ

ಕೊಪ್ಪಳ: ನಗರದ ಗವಿಮಠದವತಿಯಿಂದ ಶಿವಶಾಂತವೀರ ಸ್ವಾಮೀಜಿ ಅವರ ಪುಣ್ಯಾರಾಧನೆ ನಿಮಿತ್ತ ಗುರುವಾರ ಪಾದಯಾತ್ರೆ, ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಸ್ಮರಣೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆ ಇಲ್ಲಿನ ಮಳೆ ಮಲ್ಲೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆಗೆ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿದರು.ಗವಿಮಠದ ವರೆಗೆ ನಡೆದ ಈ ಪಾದಯಾತ್ರೆಯಲ್ಲಿ ಬಳಗಾನೂರಿನ ಶಿವಶಾಂತವೀರ ಶರಣರು, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ಗಣ್ಯರು, ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.ಬಿಸಿಲಿನ ಝಳದ ಹಿನ್ನೆಲೆಯಲ್ಲಿ ದಾರಿಯಲ್ಲಿ ವಿವಿಧೆಡೆ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗಾಗಿ ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಿದ್ದರು. ಪಾದಯಾತ್ರೆ ಶ್ರೀಮಠವನ್ನು ತಲುಪಿದ ನಂತರ ಚೆನ್ನಬಸಮ್ಮ ಗುರುಸಿದ್ಧಪ್ಪ ಕೊತಬಾಳ ಸ್ಮರಣಾರ್ಥ ವೃದ್ಧಾಶ್ರಮ ಕಟ್ಟಡಕ್ಕೆ ಮಣಿಬಾಯಿ ಷಾ ಅವರು ಭೂಮಿಪೂಜೆಯನ್ನು ನೆರವೇರಿಸಿದರು.ಶಾಸಕ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್, ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿಪಾಟೀಲ, ಕೆಜೆಪಿ ಮುಖಂಡ ಕೆ.ಎಂ.ಸೈಯದ್, ಪ್ರಭು ಹೆಬ್ಬಾಳ, ಡಾ.ಕೆ.ಜಿ.ಕುಲಕರ್ಣಿ, ಬಸವರಾಜ ಬಳ್ಳೊಳ್ಳಿ, ಬಸವರಾಜ ಪುರದ, ಸತೀಶ, ಸಂಜಯ ಕೊತಬಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಶಿಬಿರ: ಪುಣ್ಯ ಸ್ಮರಣೆ ಅಂಗವಾಗಿ ಗವಿಸಿದ್ಧೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿತ್ತು.ಬೆಂಗಳೂರು, ಹುಬ್ಬಳ್ಳಿ, ಗಂಗಾವತಿ ಹಾಗೂ ಮಹಾವಿದ್ಯಾಲಯ ತಜ್ಞವೈದ್ಯರು ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದರು.

ಪ್ರತಿಕ್ರಿಯಿಸಿ (+)