ಶಿವಸೇನೆಗೆ 151, ಬಿಜೆಪಿಗೆ 119 ಸ್ಥಾನ: ಉದ್ಧವ್ ತಂತ್ರ

ಶುಕ್ರವಾರ, ಮಾರ್ಚ್ 22, 2019
21 °C

ಶಿವಸೇನೆಗೆ 151, ಬಿಜೆಪಿಗೆ 119 ಸ್ಥಾನ: ಉದ್ಧವ್ ತಂತ್ರ

Published:
Updated:

ಮುಂಬೈ(ಪಿಟಿಐ): ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ನಡುವಿನ ಸ್ಥಾನ ಹೊಂದಾಣಿಕೆ ಬಿಕ್ಕಟ್ಟು ಮುಂದುವರಿದಿದ್ದು, ಭಾನವಾರ ಶಿವಸೇನೆ, 151-119 ಸ್ಥಾನಗಳ ಹೊಸ ಸೂತ್ರವೊಂದನ್ನು ಬಿಜೆಪಿಯ ಮುಂದಿಟ್ಟಿದೆ.ಮಹಾರಾಷ್ಟ್ರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೈತ್ರಿಕೂಟವಾದ ಶಿವಸೇನೆ-ಬಿಜೆಪಿ ಹಗ್ಗ ಜಗ್ಗಾಟ ಮುಂದುವರಿಸಿವೆ. 288 ಸ್ಥಾನಗಳ ಪೈಕಿ ಶಿವಸೇನೆ ತನ್ನ ಬಳಿ 151 ಸ್ಥಾನ ಉಳಿಸಿಕೊಂಡು ಬಿಜೆಪಿಗೆ 199 ಸ್ಥಾನಗಳನ್ನು ಮಾತ್ರ ನೀಡುವುದಾಗಿ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಿದೆ.ಶಿವಸೇನೆ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಸೇನೆ ಈ ಹಿಂದೆ ತನ್ನ ಬಳಿ 160 ಸ್ಥಾನ ಉಳಿಸಿಕೊಳ್ಳುವುದಾಗಿ ಬಯಸಿತ್ತು. ಆದೆರೆ, ಪ್ರಸ್ತುತ 151 ಸ್ಥಾನಗಳಲ್ಲಿ ಸೇನೆ ಸ್ಪರ್ಧಿಸಿ, 9 ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ. 119 ಸ್ಥಾನಗಳನ್ನು ಬಿಜೆಪಿಗೆ, ಉಳಿದ 18 ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.ಸೇನೆ ಅಧಿಕಾರಕ್ಕೆ ಬಂದರೆ ಮಹಾರಾಷ್ಟ್ರವನ್ನು ರಾಷ್ಟ್ರದ ‘ನಂಬರ್ ಒನ್’ ರಾಜ್ಯವನ್ನಾಗಿ ಮಾಡುತ್ತೇವೆ. ನನಗೆ ಅಧಿಕಾರ ಬೇಕು. ಯಾವುದೇ ಕಾರಣಕ್ಕೂ ನಾನು ಅದನ್ನು ಪಡೆದೇ ಪಡೆಯುತ್ತೇನೆ ಎಂದು ಠಾಕ್ರೆ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry