ಶನಿವಾರ, ಜೂನ್ 19, 2021
28 °C
ಆಯಾರಾಂ ಗಯಾರಾಂ

ಶಿವಸೇನೆ ತೊರೆದು ಎನ್‌ಸಿಪಿಗೆ ನರ್ವೇಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಶಿವಸೇನೆ ವಕ್ತಾರ ರಾಹುಲ್‌ ನರ್ವೇಕರ್‌ ಸೋಮವಾರ ಪಕ್ಷ ತ್ಯಜಿಸಿ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಸೇರಿದ್ದಾರೆ.ನರ್ವೇಕರ್‌ ಅವರು ಮವಲ್‌ ಕ್ಷೇತ್ರದಿಂದ ಎನ್‌ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಎನ್‌ಸಿಪಿ ಮುಖಂಡ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಸಮ್ಮುಖದಲ್ಲಿ ಪಕ್ಷ ಸೇರಿದರು.ನರ್ವೇಕರ್‌ ಎನ್‌ಸಿಪಿ ಹಿರಿಯ ಮುಖಂಡ ರಾಮ್‌ರಾಜೇ ನಾಯಕ್‌ ನಿಂಬಾಳ್ಕರ್‌ ಅವರ ಅಳಿಯನಾಗಿದ್ದು, ಶಿವಸೇನೆ ಯುವ ಘಟಕದ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಚೆಗೆ ನಡೆದ ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಿಂದ ನರ್ವೇಕರ್‌ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.