ಶುಕ್ರವಾರ, ಜೂನ್ 18, 2021
22 °C

ಶಿವಾಜಿ ಜೀವನ ದಾರಿದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಛತ್ರಪತಿ ಶಿವಾಜಿ ಮಹಾರಾಜರ ಜೀವನದಿಂದ ಅನೇಕ ಉತ್ತಮ ವಿಚಾರಗಳನ್ನು ಕಲಿತುಕೊಳ್ಳಬಹುದು. ಅವರ ಚರಿತ್ರೆ ಯುವಕರಿಗೆ ದಾರಿದೀಪವಾಗಿದೆ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಹೇಳಿದರು.ತಾಲ್ಲೂಕಿನ ತಳಭೋಗದಲ್ಲಿ ಶನಿವಾರ ಹಮ್ಮಿಕೊಂಡ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿದರು. ಶಿವಾಜಿ ಸ್ವರಾಜ ಸಂಸ್ಥಾಪಕರು, ಸರ್ವಧರ್ಮ ಸಹಿಷ್ಣು ಆಗಿದ್ದರು. ಅನೇಕ ಜನೋಪಕಾರಿ ಕಾರ್ಯ ಮಾಡಿದ್ದಾರೆ ಎಂದರು.ಯುವ ಮುಖಂಡ ದತ್ತಾ ಪರಶುರಾಮ ಮಾತನಾಡಿ ರಾಷ್ಟ್ರಪುರುಷರ ಮತ್ತು ಮಹಾತ್ಮರ ಜೀವನದಿಂದ ಒಳ್ಳೆಯದನ್ನು ಕಲಿತುಕೊಳ್ಳಬೇಕು ಎಂದು ಹೇಳಿದರು. ಪರಸ್ಪರ ಸಹಕಾರದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದರು. ಗೋವಿಂದರಾವ ಸೋಮವಂಶಿ, ಗೋವಿಂದರಾವ ಭುಸಾಳೆ ಮಾತನಾಡಿದರು.

 

ಗೋವಿಂದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಪಾಟೀಲ ಉಜಳಂಬ, ಅರ್ಜುನ ಕನಕ, ರಾಮ ಮೇತ್ರೆ, ಈಶ್ವರ ಜಮಾದಾರ, ಸುನಿತಾ ಸಸಾಣೆ, ದತ್ತಾ ಜಾವಳೆ, ಧನರಾಜ ಪಾಟೀಲ, ಓಂ ಜಾಧವ, ವಿನೋದ ಸೂರ್ಯವಂಶಿ, ಹಿರೋಬಾ ಗೌಳಿ, ಧನಂಜಯ ಜಾಧವ, ಸಂಜೀವ ಮಾನೆ, ರವಿ ಫುಲಾರಿ, ಯೋಗೇಶ ಮಾನೆ ಉಪಸ್ಥಿತರಿದ್ದರು. ಅಮರದೀಪ ನಿರೂಪಿಸಿದರು.

 

ಪ್ರತಿಮೆ: ತಾಲ್ಲೂಕಿನ ಪ್ರತಾಪುರದಲ್ಲಿ ಈಚೆಗೆ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಮತ್ತು ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀಧರರಾವ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಎಂ.ಬಿ.ಪಠಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಖುರ್ಷಿದ್ ಅಹ್ಮದ್, ಅನಿಲ ಕುಲಕರ್ಣಿ, ಗಣೇಶ ಮುಳೆ, ಸಂದೀಪ ಪಂಚಾಳ, ಕಿಶನ ಲಾಂಡಗೆ, ಅಮರದೀಪ, ನಾಗೇಶ ಕುಲಕರ್ಣಿ, ಸೋಮನಾಥ ಪಾಠೋದೆ ಮುಂತಾದವರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.