ಮಂಗಳವಾರ, ಮೇ 11, 2021
25 °C

ಶಿವಾಜಿ ನಗರದಲ್ಲಿ ಸಂತ ಮೇರಿ ಉತ್ಸವ: ಸಂಚಾರ ಮಾರ್ಗ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಾಜಿನಗರದಲ್ಲಿ ಗುರುವಾರ ಸಂತ ಮೇರಿ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಳಕಂಡ ಬದಲಾವಣೆಗಳನ್ನು ಮಾಡಲಾಗಿದೆ.ಮೀನಾಕ್ಷಿ ಕೊಯಿಲ್ ರಸ್ತೆ, ಬ್ರಾಡ್‌ವೇ ರಸ್ತೆ, ಧರ್ಮರಾಜ ಕೊಯಿಲ್ ರಸ್ತೆ, ಸೆಪ್ಪಿಂಗ್ಸ್ ರಸ್ತೆ, ಅರುಣಾಚಲಂ ಮೊದಲಿಯಾರ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.ಬಿಆರ್‌ವಿ ಜಂಕ್ಷನ್‌ನಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆ ಬಿಎಂಟಿಸಿ ಬಸ್ ಸೇರಿದಂತೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಬಾಳೇಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಮತ್ತು ಅನಿಲ್ ಕುಂಬ್ಳೆ ವೃತ್ತದಿಂದ ಸೆಂಟ್ರಲ್ ರಸ್ತೆ ಕಡೆಯೂ ಸಂಚಾರ ನಿರ್ಬಂಧಿಸಲಾಗಿದೆ.ವಾಹನ ನಿಲುಗಡೆ ಇಲ್ಲ: ರಸೆಲ್ ಮಾರುಕಟ್ಟೆ ಸುತ್ತಮುತ್ತ, ಬ್ರಾಡ್‌ವೇ ರಸ್ತೆ, ಮೀನಾಕ್ಷಿ ಕೊಯಿಲ್ ರಸ್ತೆ, ಸೆಂಟ್ರಲ್ ರಸ್ತೆ, ಶಿವಾಜಿ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ಬಾಳೇಕುಂದ್ರಿ ವೃತ್ತ, ಯೂನಿಯನ್ ರಸ್ತೆ, ಬಿಆರ್‌ವಿ ಪೆರೇಡ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಲೇಡಿ ಕರ್ಜನ್ ರಸ್ತೆ, ವಿ.ಎಸ್.ಎನ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ.ವಾಹನ ನಿಲುಗಡೆಗೆ ಸ್ಥಳ: ಕಾಮರಾಜ ರಸ್ತೆ ವಾಹನ ನಿಲುಗಡೆ ಪ್ರದೇಶ, ಸಫೀನಾ ಪ್ಲಾಜಾ ಮುಂಭಾಗ, ಜಸ್ಮಾ ಭವನ ರಸ್ತೆ, ಆರ್‌ಬಿಎಎನ್‌ಎಂಎಸ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ.ಬಿಎಂಟಿಸಿ ನಿಲ್ದಾಣ: ಹಲಸೂರು, ಓಎಂ ರಸ್ತೆ, ದೊಮ್ಮಲೂರು, ಕೆ.ಆರ್.ಪುರ, ಮಾರತ್‌ಹಳ್ಳಿ, ವರ್ತೂರು, ವೈಟ್‌ಫೀಲ್ಡ್, ಕಾಡುಗೋಡಿ ಮತ್ತು ಹೊಸಕೋಟೆ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ಕಬ್ಬನ್ ರಸ್ತೆಯಿಂದ (ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ ಮಧ್ಯೆ) ಹೊರಡಲಿವೆ.   ಜಯನಗರ, ಕೆ.ಎಚ್.ರಸ್ತೆ, ಹೊಸೂರು ರಸ್ತೆ, ಕೋರಮಂಗಲ ಮತ್ತು ಬನ್ನೇರುಘಟ್ಟ ಕಡೆ ಸಾಗುವ ಬಸ್‌ಗಳು ಬಿ.ಆರ್.ವಿ ಪೆರೇಡ್ ರಸ್ತೆ ಸಮೀಪದಿಂದ ಹೊರಡಲಿವೆ. ಬಾಳೇಕುಂದ್ರಿ ವೃತ್ತ ಬಳಿ ಬಿಎಂಟಿಸಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದ್ದು, ಇಲ್ಲಿಂದ ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಮಲ್ಲೇಶ್ವರ, ರಾಜಾಜಿನಗರ, ಸಿಟಿ ಮಾರುಕಟ್ಟೆ ಮತ್ತು ಮೈಸೂರು ರಸ್ತೆ ಕಡೆಗೆ ಬಸ್‌ಗಳು ಸಂಚರಿಸಲಿವೆ.ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ನಿಲುಗಡೆ ಪ್ರದೇಶದಿಂದ ಹೊರಡುವ ಬಸ್‌ಗಳು ಜೆ.ಸಿ.ನಗರ, ಆರ್.ಟಿ.ನಗರ, ಯಶವಂತಪುರ, ಪೀಣ್ಯ, ಹೆಬ್ಬಾಳ, ಯಲಹಂಕ, ಜಾಲಹಳ್ಳಿ, ಟ್ಯಾನರಿ ರಸ್ತೆ, ನಾಗವಾರ, ಬಾಣಸವಾಡಿ, ಲಿಂಗರಾಜಪುರ ಮತ್ತು ರಾಮಮೂರ್ತಿನಗರದ ಕಡೆ ಸಂಚರಿಸಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.