ಗುರುವಾರ , ಮೇ 26, 2022
23 °C

ಶಿವಾನಂದ ಸರಸ್ವತಿ ಸ್ವಾಮೀಜಿ ಚಾತುರ್ಮಾಸ 22ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ ಇದೇ 22ರಿಂದ ಸೆಪ್ಟೆಂಬರ್ 20ರ ವರೆಗೆ ನಗರದ ಶ್ರೀ ಸರಸ್ವತಿ ಸದನದಲ್ಲಿ ನಡೆಯಲಿದೆ.`ನಗರದ ಗೌಡ ಸಾರಸ್ವತ ಸಮಾಜ (ಜಿಎಸ್‌ಬಿ) ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕಾಗಿ ಸ್ವಾಮೀಜಿ ಈಗಾಗಲೇ ಆಗಮಿಸಿದ್ದು ಸೆಪ್ಟೆಂಬರ್ 22ರಂದು ನಗರದಿಂದ ತೆರಳಲಿದ್ದಾರೆ. ಚಾತುರ್ಮಾಸ್ಯದ ಅವಧಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ವೈವಿಧ್ಯ ಇರುತ್ತದೆ' ಎಂದು ಚಾತುರ್ಮಾಸ್ಯ ಸಮಿತಿಯ ಕಾರ್ಯದರ್ಶಿ ಮಹೇಶ ಮಾನಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಗುರುಪೂರ್ಣಿಮೆ ದಿನವಾದ 22ರಂದು ಬೆಳಿಗ್ಗೆ 9.30ಕ್ಕೆ ವ್ಯಾಸಪೂಜೆಯ ನಂತರ ಚಾತುರ್ಮಾಸ್ಯ ವೃತ ಸ್ವೀಕಾರ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಪ್ರತಿದಿನ ಮಧ್ಯಾಹ್ನ ಪೂಜೆ, ಪಾದಪೂಜೆ, ಶ್ರಾವಣ ಸೋಮವಾರಗಳಲ್ಲಿ  ಸಂಜೆ 7 ಗಂಟೆಗೆ ಪ್ರದೋಷ ಪೂಜೆ ನಡೆಯಲಿದೆ' ಎಂದು ಅವರು ವಿವರಿಸಿದರು.`ನಾಗರ ಪಂಚಮಿ (ಆಗಸ್ಟ್ 11), ವರ ಮಹಾಲಕ್ಷ್ಮಿ ಪೂಜೆ (ಆಗಸ್ಟ್ 16), ಶ್ರೀಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 28), ಗಣೇಶೋತ್ಸವ ಆರಂಭ (ಸೆಪ್ಟೆಂಬರ್ 9) ಮತ್ತು ಗಣೇಶೋತ್ಸವ ಮುಕ್ತಾಯ (ಸೆಪ್ಟೆಂಬರ್ 20) ದಿನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ' ಎಂದರು.`67 ವರ್ಷಗಳಿಂದ ಸಮಾಜದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಜಿಎಸ್‌ಬಿ ಸಮಾಜ ಸಂಘಟನೆ ಧಾರ್ಮಿಕ ಕಾರ್ಯಗಳೊಂದಿಗೆ ಸಾಮಾಜಿಕ ಕೆಲಸಗಳನ್ನು ಕೂಡ ನಡೆಸುತ್ತ ಬಂದಿದೆ. ಸಮಾಜದ ಜನರನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ವರ್ಷಕ್ಕೊಮ್ಮೆ ನಡೆಯುವ `ಕೊಂಕಣ ಹಬ್ಬ'ದಲ್ಲಿ ಸಾಂಸ್ಕೃತಿಕ ಜಗತ್ತು ಅನಾವರಣಗೊಳ್ಳುತ್ತದೆ.ಕ್ರೀಡಾ ಚಟುವಟಿಕೆಗಳಲ್ಲೂ ಸಂಘಟನೆ ಹಿಂದೆ ಬಿದ್ದಿಲ್ಲ. ಆರ್ಥಿಕವಾಗಿ ಹಿಂದುಳಿದವರ ಶಿಕ್ಷಣಕ್ಕಾಗಿ ಪ್ರತಿ ವರ್ಷ ಸುಮಾರು ರೂ ಐದು ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಧು-ವರರ ಹೊಂದಾಣಿಕೆಗಾಗಿ ವೆಬ್‌ಸೈಟ್ ಆರಂಭಿಸಲಾಗಿದ್ದು ಅನೇಕರಿಗೆ ಸಹಕಾರಿಯಾಗಿದೆ' ಎಂದು ಅವರು ತಿಳಿಸಿದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ ಆರ್.ಎನ್.ನಾಯಕ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಸದಾನಂದ ಕಾಮತ್, ವಿಠಲ ಜಿ.ಶಾನಭಾಗ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಕಾಲಾವಕಾಶ ನೀಡಲು ಮನವಿ

ಹುಬ್ಬಳ್ಳಿ
: ನಗರದಲ್ಲಿ 144 ಪಡಿತರ ಕೇಂದ್ರಗಳಿಗೆ ಪಡಿತರ ಯಂತ್ರಗಳನ್ನು ಅಳವಡಿಸಲಾಗಿದೆ. ಅದರಂತೆ ಅಂಗಡಿಗಳಲ್ಲಿ ಪಡಿತರ ವಿತರಣೆ ಕಾರ್ಯ ನಡೆದಿದೆ ಆದರೆ ಇನ್ನು ಕೆಲವು ಅಂಗಡಿಗಳಲ್ಲಿ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳು ಕಾರ್ಯ ನಿರ್ವಹಿಸಬೇಕಾದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜುಲೈ ತಿಂಗಳ ಮಟ್ಟಿಗೆ ಹಿಂದಿನ ಪದ್ದತಿಯಂತೆ ಅನ್ನ ಭಾಗ್ಯ ಯೋಜನೆಯನ್ನು ವಿತರಿಸಲು ಅವಕಾಶ ನೀಡಬೇಕು ಎಂದು ಹುಬ್ಬಳ್ಳಿ ಪಡಿತರ ವಿತರಕರ ಸಂಘ ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದೆ.ಮಕ್ಕಳ ಪ್ರಶಸ್ತಿಗೆ ಅರ್ಜಿ ಆಹ್ವಾನ

ಧಾರವಾಡ
: ಕಲೆ, ಶಿಕ್ಷಣ, ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ 4ರಿಂದ 15 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಧಾರವಾಡ ಇವರಿಂದ ಪಡೆದು ಜುಲೈ 22ರ ಒಳಗೆ ಸಲ್ಲಿಸಲು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.