ಶಿವಾನಿ ಕೊಲೆ ಪ್ರಕರಣ: ಶರ್ಮಾಗೆ ನೋಟಿಸ್

7

ಶಿವಾನಿ ಕೊಲೆ ಪ್ರಕರಣ: ಶರ್ಮಾಗೆ ನೋಟಿಸ್

Published:
Updated:

ನವದೆಹಲಿ (ಪಿಟಿಐ): ವಜಾಗೊಂಡ ಐಪಿಎಸ್ ಅಧಿಕಾರಿ ಆರ್.ಕೆ. ಶರ್ಮಾ ಅವರನ್ನು ಪತ್ರಕರ್ತೆ ಶಿವಾನಿ ಭಗ್ನಾಟರ್ ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೊರ್ಟ್ ಸೋಮವಾರ ಶರ್ಮಾ ಅವರಿಗೆ ನೋಟಿಸ್ ನೀಡಿದೆ.ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ, ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಒಳಗೊಂಡ ಪೀಠವು ಶ್ರೀ ಭಗವಾನ್ ಹಾಗೂ ಸತ್ಯಪ್ರಕಾಶ್ ಎಂಬುವವರಿಗೂ ನೋಟಿಸ್ ನೀಡಿದೆ.1999ರಲ್ಲಿ  ಪೂರ್ವ ದೆಹಲಿಯ ಫ್ಲಾಟ್‌ನಲ್ಲಿ ಪತ್ರಕರ್ತೆ ಶಿವಾನಿ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶ್ರೀ ಭಗವಾನ್ ಹಾಗೂ ಸತ್ಯ ಪ್ರಕಾಶ್ ಅವರನ್ನೂ ಖುಲಾಸೆಗೊಳಿಸಿತ್ತು.ಶರ್ಮಾ, ಶ್ರೀ ಭಗವಾನ್ ಹಾಗೂ ಸತ್ಯಪ್ರಕಾಶ್ ಅವರನ್ನು ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಕಳೆದ ಅಕ್ಟೋಬರ್ 12 ರಂದು ದೆಹಲಿ ಪೊಲೀಸರು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry