ಶಿಶಿಕ್ಷು ತರಬೇತಿ ನಾಳೆ ಸಂದರ್ಶನ

ಭಾನುವಾರ, ಮೇ 26, 2019
22 °C

ಶಿಶಿಕ್ಷು ತರಬೇತಿ ನಾಳೆ ಸಂದರ್ಶನ

Published:
Updated:

ಬೆಂಗಳೂರು: ಬಿಇ ಮತ್ತು ಡಿಪ್ಲೊಮಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವಿವಿಧ ಉದ್ದಿಮೆಗಳಲ್ಲಿ ಒಂದು ವರ್ಷದ ಶಿಶಿಕ್ಷು ತರಬೇತಿಗಾಗಿ ಇದೇ 16ರಂದು ಬೆಳಗಾವಿಯ ಶಿವಬಸವ ನಗರದಲ್ಲಿರುವ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್‌ನಲ್ಲಿ ಸಂದರ್ಶನವನ್ನು ಏರ್ಪಡಿಸಲಾಗಿದೆ.ಅಂದು ಬೆಳಿಗ್ಗೆ 10ರಿಂದ 1.30ರವರೆಗೆ ಡಿಪ್ಲೊಮಾ ಮತ್ತು ಮಧ್ಯಾಹ್ನ 2ರಿಂದ 5ರವರೆಗೆ ಎಂಜಿನಿಯರಿಂಗ್ ಪಾಸಾದ ಅಭ್ಯರ್ಥಿಗಳಿಗೆ ಸಂದರ್ಶನ ಏರ್ಪಡಿಸಲಾಗಿದ್ದು, ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳು ಇದರಲ್ಲಿ ಭಾಗವಹಿಸುತ್ತವೆ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.2009ರ ಆಗಸ್ಟ್ ನಂತರ ತೇರ್ಗಡೆಯಾದವರು ಮಾತ್ರ ಮೂಲ ದಾಖಲಾತಿಗಳೊಂದಿಗೆ ಭಾಗವಹಿಸಬಹುದು. ಆಯ್ಕೆಯಾದವರಿಗೆ ಒಂದು ವರ್ಷ ತರಬೇತಿ ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry