ಭಾನುವಾರ, ನವೆಂಬರ್ 17, 2019
29 °C

ಶಿಶಿಲದಲ್ಲಿ ಕಾಣಿಸಿದ ನಕ್ಸಲರ ತಂಡ

Published:
Updated:

ಉಪ್ಪಿನಂಗಡಿ: ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾಮದಲ್ಲಿ ಮಂಗಳವಾರ ಸಂಜೆ ಆರು ಮಂದಿ ನಕ್ಸಲರ ತಂಡವೊಂದು ಕಾಣಿಸಿಕೊಂಡಿದ್ದು, ತಂಡದಲ್ಲಿ ನಾಲ್ವರು ಶಸ್ತ್ರಧಾರಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಶಿಶಿಲ ಗ್ರಾಮದ ಅಂಬುಡೆದಂಗೆ ಎಂಬಲ್ಲಿ ಕಾಡಿನ ಅಂಚಿನಲ್ಲಿರುವ ಪರಿಶಿಷ್ಟರ ಕಾಲೋನಿ ಮನೆಯೊಂದಕ್ಕೆ ಭೇಟಿ ನೀಡಿದ ಖಾಕಿ ಬಣ್ಣದ ಸಮವಸ್ತ್ರ ಧರಿಸಿದ್ದ ಆರು ಮಂದಿ, ~ನಾವು ನಕ್ಸಲರು. ನಮ್ಮ ಬಗ್ಗೆ ನೀವು ಹೆದರಬೇಕಾದ ಅಗತ್ಯ ಇಲ್ಲ. ಮತ್ತೆ ಇಲ್ಲಿಗೆ ಬರುತ್ತೇವೆ~ ಎಂದು ಹೇಳಿ ಬಳಿಕ ಕಾಡು ದಾರಿ ಹಿಡಿದರು. ಅವರ ಬಳಿ ಚೀಲ ಹಾಗೂ ಟಾರ್ಚ್ ಇತ್ತು ಎನ್ನಲಾಗಿದೆ. ಮಲೆಕುಡಿಯ ವ್ಯಕ್ತಿಯೊಬ್ಬರಿಗೆ ಕಾಡು ದಾರಿಯಲ್ಲಿ ನಕ್ಸಲರ ತಂಡ ಕಾಣಿಸಿಕೊಂಡಿತ್ತು. ಅವರನ್ನು ಕಾಣುತ್ತಲೇ ಆ ವ್ಯಕ್ತಿ ಹೆದರಿ ಮನೆಯತ್ತ ಓಡಿಬಂದರು. ಅವರ ಬೆನ್ನಲ್ಲೇ ಆಗಮಿಸಿದ ನಕ್ಸಲ ತಂಡ ಗ್ರಾಮಸ್ಥರನ್ನು ಮಾತನಾಡಿಸಿದೆ~ ಎಂದು ಮೂಲಗಳು ತಿಳಿಸಿವೆ.

 

ಪ್ರತಿಕ್ರಿಯಿಸಿ (+)