ಮಂಗಳವಾರ, ಮೇ 24, 2022
31 °C

ಶಿಶುವಿಹಾರ ಶಿಕ್ಷಣ: ಹೆಚ್ಚುತ್ತಿರುವ ಮಹತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋದ್ದಾರ್ ಶಿಕ್ಷಣ ಸಂಸ್ಥೆ ಮತ್ತು ನ್ಯೂಜಿಲೆಂಡ್ ಟೆರಿಟರಿ ಮಂಡಳಿ (ಎನ್‌ಜಡ್ ಟಿಸಿ), ಜಂಟಿಯಾಗಿ ಪೂರ್ವ ಪ್ರಾಥಮಿಕ (ಶಿಶುವಿಹಾರ) ಮಕ್ಕಳ ಶಿಕ್ಷಣ ಮತ್ತು ಬೋಧಕರು ನಿರ್ವಹಿಸುವ ಪಾತ್ರದ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಿದ್ದವು. ಶಿಕ್ಷಣ ರಂಗದಲ್ಲಿನ ಇತ್ತೀಚಿನ ಕಲಿಕಾ ಪದ್ಧತಿ, ಮೆದುಳಿನ ಸಂಶೋಧನೆ ಮತ್ತಿತರ ವಿಷಯಗಳ ಮೇಲೆ ಸಮಾವೇಶವು ಬೆಳಕು ಚೆಲ್ಲಿತು. ಜಾಗತಿಕ ಮಟ್ಟದಲ್ಲಿ ಸದ್ಯಕ್ಕೆ ಪಾಲಿಸಲಾಗುತ್ತಿರುವ ಶಿಶು ವಿಹಾರ ಶಿಕ್ಷಣ ಪದ್ಧತಿಗಳನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿತು.   ಮುಂಬೈನ ಮನಶಾಸ್ತ್ರಜ್ಞ ಡಾ. ಹರೀಶ್ ಶೆಟ್ಟಿ ಮಾತನಾಡಿ, ಶಿಕ್ಷಕರಿಗೆ ಮಹತ್ವದ್ದಾಗಿರುವ ಬರಹದ ಮುಂಚಿನ ಓದು, ಪುಟ್ಟ ಮಕ್ಕಳಿಗೆ ಬರಹ ಪರಿಚಯಿಸುವ, ಮಕ್ಕಳ ಹೊರಾಂಗಣ ಆಟ, ಶಿಶುವಿಹಾರದ ಚಟುವಟಿಕೆಗಳಲ್ಲಿ ಪಾಲಕರ ಭಾಗವಹಿಸುವಿಕೆ, ಮಕ್ಕಳ ಭಾವನಾತ್ಮಕ ಹಾಗೂ ಬೌದ್ಧಿಕ ಬೆಳವಣಿಗೆ ಬಗ್ಗೆ ಈಗ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು. ಪೋದ್ದಾರ್ ಶಿಕ್ಷಣ ಜಾಲದ ನಿರ್ದೇಶಕಿ ಸ್ವಾತಿ ಪೋದ್ದಾರ್ ವತ್ಸ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಘಟನೆಗಳು ಮತ್ತು ಖಾಸಗಿ ಶಿಶುಪಾಲನಾ ಕೇಂದ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

g

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.