ಶಿಶು ಆಹಾರ ಉದ್ಯಮ ಬೆಳವಣಿಗೆ

7

ಶಿಶು ಆಹಾರ ಉದ್ಯಮ ಬೆಳವಣಿಗೆ

Published:
Updated:
ಶಿಶು ಆಹಾರ ಉದ್ಯಮ ಬೆಳವಣಿಗೆ

ಕಳೆದೆರಡು ದಶಕದಿಂದೀಚೆಗೆ ಹಸುಗೂಸುಗಳು ಸಿದ್ಧ ಆಹಾರದ ಉದ್ಯಮ ಪರಿವರ್ತನೆಯ ಹಾದಿಯಲ್ಲಿ ವೇಗವಾಗಿ ಸಾಗಿ ಬಂದಿದೆ. ಅಸಂಘಟಿತ ವಲಯವೆಂಬ ಹಣೆಪಟ್ಟಿಯನ್ನು ತೆಗೆದು ಹಾಕಿ ಸಂಘಟಿತ ಚಿಲ್ಲರೆ ವ್ಯಾಪಾರದ ಪ್ರಮುಖ ಭಾಗವಾಗಿ ಬೆಳೆಯುತ್ತಿದೆ.ದುಡಿಯುವ ತಾಯಂದಿರಿಗೆ ಸುರಕ್ಷಿತ ಆಹಾರದ ವಾಗ್ದಾನ ನೀಡುತ್ತಾ, ಎಳೆಯ ನಾಲಿಗೆಗೆ ಮೋಡಿ ಮಾಡಿ, ಪುಟ್ಟ ಮನಸ್ಸುಗಳನ್ನು ಗೆಲ್ಲುತ್ತಾ, ಮಾತೃ ಹೃದಯಗಳನ್ನೂ ತಟ್ಟುತ್ತಾ, ಅಮ್ಮನ ಎದೆಹಾಲಿನ ಅಮೃತವನ್ನೇ ಪ್ಯಾಕೇಟಿನಲ್ಲಿ ತುಂಬಲಾಗಿದೆಯೇನೊ ಎನ್ನುವ ಭರವಸೆಯ ಭಾವ ಬಿತ್ತುತ್ತಾ ಲಾಭ ಗಳಿಕೆಯ ಏಣಿ ಏರುತ್ತಲೇ ಇದೆ ಈ ಉದ್ಯಮ.ಇತ್ತ ಮಗುವಿನ ಆಹಾರ ಇಂದಿನ ತಾಯಿಗೆ ಅತ್ಯಂತ ಮಹತ್ವದ ಮತ್ತು ಬಲು ಸೂಕ್ಷ್ಮ ಸಂಗತಿ. ಹಿಂದೆಂದಿಗಿಂತಲೂ ಇಂದು ಶಿಶು ಆಹಾರಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಮಕ್ಕಳು ಬಹಳ ಬೇಗ ಕಾಯಿಲೆಗಳಿಗೆ ತುತ್ತಾಗುವುದರಿಂದ ಮಗುವಿನ ಆಹಾರದ ಶುದ್ಧತೆ ಬಗ್ಗೆ ಜಾಗೃತಿ ಬೆಳೆಯುತ್ತಿದೆ. ಅದರಲ್ಲಿ ಅಡಕವಾಗಿರುವ ಖನಿಜಾಂಶಗಳು ಮತ್ತು ಪ್ರೋಟಿನ್ ಸೇರಿದಂತೆ ವಿವಿಧ ಜೀವಸತ್ವಗಳ ಬಗ್ಗೆ ತಾಯಂದಿರು ಹೆಚ್ಚು ನಿರ್ದಿಷ್ಟವಾಗಿರುವುದು, ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನೇ ನೀಡಬೇಕು ಎನ್ನುವ ಯುವ ಪಾಲಕರ ಕಾಳಜಿಯೇ ಇದಕ್ಕೆ ಕಾರಣ.ಇದೆಲ್ಲದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಶಿಶುಗಳ ಸಿದ್ಧ ಆಹಾರ ಉದ್ಯಮ ಹೊಸ ಸಂಚಲನ ಮೂಡಿಸುತ್ತಿದೆ. ಮಾತ್ರವಲ್ಲ, ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಐದು ತಿಂಗಳಿಂದ ಐದು ವರ್ಷಗಳ ಒಳಗಿನ ಮಕ್ಕಳಿಗೆ ಘನ ಮತ್ತು ದ್ರವ ರೂಪದಲ್ಲಿ, ವಿವಿಧ ರೀತಿಯ ಸಿದ್ಧ ಆಹಾರಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಮಕ್ಕಳ ಆರೈಕೆ ಹಾಗೂ ಆಹಾರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆಯ ಅಭಿವೃದ್ಧಿಗೆ ಈಗ ಪ್ರಶಸ್ತ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತದೆ ಮಾರುಕಟ್ಟೆ ಮತ್ತು ಉದ್ಯಮಗಳ ಅಂತರರಾಷ್ಟ್ರೀಯ ಸಮೀಕ್ಷಾ ಸಂಸ್ಥೆ  ‘RNCOS’ ಸಮೀಕ್ಷೆ.ಉದ್ಯಮದ ವಹಿವಾಟು

ಭಾರತದಲ್ಲಿ `ಮಕ್ಕಳ ಆಹಾರ  ಮತ್ತು ಆರೈಕೆ' ಉತ್ಪನ್ನಗಳ ಒಟ್ಟು ಮಾರುಕಟ್ಟೆಯ ಗಾತ್ರ ಸುಮಾರು ರೂ3000 ಕೋಟಿಯಷ್ಟಿದೆ. ಉದ್ಯಮ ವಾರ್ಷಿಕ ಸರಾಸರಿ ಶೇ 20ರಷ್ಟು ಅಭಿವೃದ್ಧಿ ಸಾಧಿಸುತ್ತಿದೆ. ಇತ್ತೀಚಿನ ವರ್ಷಗಳ ಬದಲಾದ ಪರಿಸ್ಥಿತಿಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ 2014ರ ವೇಳೆಗೆ ಮಕ್ಕಳ ಆರೈಕೆ ಹಾಗೂ ಆಹಾರಗಳ ಒಟ್ಟಾರೆ ಉದ್ಯಮ ಸುಮಾರು ರೂ4,200 ಕೋಟಿ ತಲುಪುವ ನಿರೀಕ್ಷೆ ಇದೆ.ಇದರಲ್ಲಿ ಮಕ್ಕಳ ಆಹಾರ, ಚರ್ಮದ ಆರೈಕೆ, ಡೈಪರ್, ಶಾಂಪೂ, ಸಾಬೂನು, ಕೇಶತೈಲ, ಕ್ರೀಂ ಸೇರಿದಂತೆ ಬಹುತೇಕ ಎಲ್ಲಾ ಅಗತ್ಯ ಉತ್ಪನ್ನಗಳೂ ಒಳಗೊಂಡಿವೆ.  ಕೇವಲ ಶಿಶುಗಳ ಸಿದ್ಧ ಆಹಾರ ಉತ್ಪನ್ನಗಳ ಬಗೆಗೇ ಹೇಳುವುದಾದರೆ ಭಾರತದಲ್ಲಿನ ಅದರ ಮಾರುಕಟ್ಟೆ ಗಾತ್ರ ಸುಮಾರು ರೂ1500 ಕೋಟಿಯಷ್ಟಿದೆ.ಮಕ್ಕಳ ಕೇಶ ಆರೈಕೆಯ ಪಾಲು ರೂ40 ಕೋಟಿಯಷ್ಟಿದ್ದು, ವಾರ್ಷಿಕ ಶೇ 5ರಷ್ಟು ಪ್ರಗತಿ ದಾಖಲಿಸುತ್ತಿದೆ. ಮಕ್ಕಳ ಚರ್ಮದ ಆರೈಕೆ ಉತ್ಪನ್ನಗಳ ಮಾರುಕಟ್ಟೆ ಪಾಲು ರೂ400 ಕೋಟಿಯಷ್ಟಿದ್ದು, ವಾರ್ಷಿಕ ಶೇ 15ರಷ್ಟು ಅಭಿವೃದ್ಧಿ ಸಾಧಿಸುತ್ತಿದೆ.ಭಾರತದಲ್ಲಿ ಪ್ರತಿವರ್ಷ ಹುಟ್ಟುವ ಒಟ್ಟು ಮಕ್ಕಳಲ್ಲಿ ಶೇ 10ರಿಂದ 15ರಷ್ಟು ಮಕ್ಕಳ ಪಾಲಕರು ವಾರ್ಷಿಕ ರೂ6,000ರಿಂದ 8,000ರಷ್ಟು ಹಣವನ್ನು ಮಕ್ಕಳ ಆರೈಕೆ ಹಾಗೂ ಆಹಾರ ಉತ್ಪನ್ನಗಳ ಮೇಲೆ ಖರ್ಚು ಮಾಡುತ್ತಾರೆ.`ಭಾರತದಲ್ಲಿ ಮಕ್ಕಳ ವೈಯಕ್ತಿಕ ಕಾಳಜಿ ಉತ್ಪನ್ನಗಳ ಹೆಚ್ಚುತ್ತಿರುವ ಬೇಡಿಕೆ' ಎಂಬ ವಿಚಾರವಾಗಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಅರ್ಥಾತ್ `ಅಖಖಇಏಅ' ನಡೆಸಿದ ಸಮೀಕ್ಷೆ ಈ ಮೇಲಿನ ಅಂಶಗಳನ್ನು ಖಚಿತಪಡಿಸುತ್ತದೆ.ಅವಿಭಕ್ತ ಮತ್ತು ವಿಭಕ್ತ ಎರಡೂ ಪ್ರಕಾರದ ಕುಟುಂಬಗಳಲ್ಲಿಯೂ ಈಗ ಮಕ್ಕಳ ಸಿದ್ಧ ಆಹಾರದ ಬಳಕೆ ಹೆಚ್ಚುತ್ತಿರುವುದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ.ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಬೆಂಗಳೂರಿನಂತಹ ಮಹಾ ನಗರಗಳಲ್ಲಿನ ದುಡಿಯುವ ಪಾಲಕರಲ್ಲಿ(ತಂದೆ-ತಾಯಿ ಇಬ್ಬರೂ ಉದ್ಯೋಗಿಗಳು) ಶೇ 82ರಷ್ಟು ಪೋಷಕರು ಇಂತಹ ಸಿದ್ಧ ಶಿಶು ಆಹಾರ ಉತ್ಪನ್ನಗಳನ್ನೇ ಬಳಸುವವರಾಗಿದ್ದಾರೆ. ಅಲ್ಲದೇ, ಜಾಹಿರಾತು ಹಾಗೂ ಮಾರ್ಕೆಟಿಂಗ್ ತಂತ್ರಗಳಿಂದಾಗಿ ಜಿಲ್ಲಾ, ತಾಲ್ಲೂಕು, ಪಟ್ಟಣ ಪ್ರದೇಶಗಳಲ್ಲಿಯೂ ಸಹ ಪುಟ್ಟ ಮಕ್ಕಳ ಸಿದ್ಧ ಆಹಾರ ಉತ್ಪನ್ನಗಳತ್ತ ಒಲವು ಹೆಚ್ಚುತ್ತಿದೆ.ಒಟ್ಟು ಮಾರುಕಟ್ಟೆಯಲ್ಲಿ ದೊಡ್ಡ ಪಾಲು ನೆಸ್ಲೆ ಕಂಪೆನಿಯದಾಗಿದೆ.  ಫೆರೆಕ್ಸ್, ನುಸೊಬಿ, ಅಮೂಲ್ ಪ್ರಮುಖ ಕಂಪೆನಿಗಳಾಗಿವೆ. ಪ್ರಿಸ್ಟೀನ್‌ನಂತಹ ಕಂಪೆನಿ ಸಹ ಸ್ಪರ್ಧೆಗಿಳಿದಿವೆ.ಹಳೆ ಬೇರು ಹೊಸ ಅಲೆ

ಕಳೆದೊಂದು ದಶಕದ ಹಿಂದೆ ಶಿಶುಗಳ ಸಿದ್ಧ ಆಹಾರದ ಬ್ರಾಂಡ್‌ಗಳಲ್ಲಿ ಅಂತಹ ವೈವಿಧ್ಯತೆಗಳೇನೂ ಇರಲಿಲ್ಲ. ಒಂದೆರಡು ಬಗೆಯ ದ್ರವ ಆಹಾರ ಬಿಟ್ಟರೆ ಬಹುತೇಕ ಮನೆಗಳಲ್ಲಿ ತಯಾರಿಸುವ ಪದಾರ್ಥಗಳೇ ಶಿಶುಗಳ ಬಾಯಿಗೆ ಗಟ್ಟಿ ಆಹಾರದ ಮೊದಲ ತುತ್ತಾಗಿ ಸೇರಿಕೊಳ್ಳುತ್ತಿದ್ದವು.ಮೆದುವಾದ ಅನ್ನ-ತುಪ್ಪ-ಚಿಟಿಕೆ ಉಪ್ಪು ಸೇರಿಸಿ ಅಮ್ಮನೋ-ಅಜ್ಜಿಯೋ ಕಲೆಸಿ ಕಂದನ ಬಾಯಿಗಿಡುತ್ತಿದ್ದರು. ಹೀಗೆ ಮಕ್ಕಳ ಆಹಾರಾಭ್ಯಾಸ ಆರಂಭವಾಗುತ್ತಿತ್ತು. ಅಕ್ಕಿ, ರಾಗಿ, ಗೋಧಿ, ದ್ವಿದಳ ಧಾನ್ಯ, ತಾಜಾ ಹಣ್ಣು, ತರಕಾರಿಯಿಂದ ತಯಾರಿಸುವ ದ್ರವ ರೂಪದ ಆಹಾರ ಮಕ್ಕಳ ಹೊಟ್ಟೆಗೆ ಹಿತವಾಗಿ ಹೊಂದಿಕೊಳ್ಳುತ್ತಿತ್ತು.ಆದರೆ 1990ರಿಂದೀಚೆಗೆ ಹೆಚ್ಚಿನ ತಾಯಂದಿರು ಹೊರಗೆ ದುಡಿಯಲು ಆರಂಭಿಸಿದ ಮೇಲೆ ಸಿದ್ಧ ಶಿಶು ಆಹಾರಗಳ ಹುಡುಕಾಟ ಶುರುವಾಯಿತು. ನಂತರದ ದಿನಗಳಲ್ಲಿ ಭಾರತದ ಅನೇಕ ಆಹಾರ ತಯಾರಿಕಾ ಕಂಪೆನಿಗಳು ಶಿಶು ಆಹಾರ ಸಿದ್ಧಪಡಿಸಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿದ ತಗಡಿನ ಡಬ್ಬಿಯಲ್ಲಿ ಕೊಡುವುದರತ್ತ ಆಸಕ್ತಿ ತೋರಿದವು. ಮಕ್ಕಳ ಆಹಾರದ ಸಾಂಪ್ರದಾಯಿಕ ಪದ್ಧತಿಯ ಮೂಲ ಸೂತ್ರವನ್ನೇ ಅನುಸರಿಸಿ ಆಹಾರ ತಯಾರಿಕೆಗೆ ಮುಂದಾದವು. ಮಕ್ಕಳ ತಜ್ಞವೈದ್ಯರ ಸಲಹೆ ಪಡೆದು ಶಿಶು ಆಹಾರದ ಗುಣಮಟ್ಟ ಪ್ರಮಾಣೀಕರಿಸಲಾಯಿತು.ಅನೇಕ ಕಡೆ ಮಕ್ಕಳ ವೈದ್ಯರೂ ಸಹ ಇಂತಹ ಸಿದ್ಧ ಆಹಾರದ ರೂಢಿಯ ಸಲಹೆಗಳನ್ನೇ ಕೊಡಲಾರಂಭಿಸಿದರು. ಅಂತೆಯೇ ಆಕರ್ಷಕ ಪ್ಯಾಕಿಂಗ್ ಮತ್ತು ವಿವಿಧ ಸ್ವಾಧಗಳಲ್ಲಿ ಶಿಶು ಸಿದ್ಧ ಆಹಾರ ಉತ್ಪನ್ನಗಳು ಔಷಧ ಅಂಗಡಿ, ಮಾಲ್, ಚಿಲ್ಲರೆ ದಿನಸಿ ಅಂಗಡಿಗಳಲ್ಲೆಲ್ಲ ಪ್ರತ್ಯೇಕ ಜಾಗ ಪಡೆದುಕೊಳ್ಳುತ್ತಾ ಹೋದವು.ಸವಾಲಿನ ಜತೆಗೇ ಏಳಿಗೆ

ಒಂದೆಡೆ ಉದ್ಯಮ ಕ್ಷೇತ್ರದ ತುರುಸಿನ ಸ್ಪರ್ಧೆಗೆ ಒಡ್ಡಿಕೊಂಡು ಗೆಲ್ಲಬೇಕು. ಇನ್ನೊಂದೆಡೆ ವಿದೇಶಿ ಬ್ರಾಂಡ್‌ಗಳೊಂದಿಗೂ ಪೈಪೋಟಿ ನಡೆಸಬೇಕು. ಜತೆಗೆ ಬೆಲೆ ಸಮರವನ್ನೂ ಎದುರಿಸಬೇಕು. ಹಸುಗೂಸುಗಳ ಆಹಾರ ಮತ್ತು ಆರೋಗ್ಯದ ವಿಷಯವಾದ್ದರಿಂದ ಗುಣಮಟ್ಟದಲ್ಲಿ ಶ್ರೇಷ್ಠತೆ ಕಾಯ್ದುಕೊಳ್ಳಲೇಬೇಕು...

ಇಂತಹ ಅನೇಕ ಸವಾಲುಗಳ ನಡುವೆಯೂ ಈ ಉದ್ಯಮ ಪ್ರಗತಿಯ ಹಾದಿಯಲ್ಲಿಯೇ ಇದೆ. ಮಕ್ಕಳ ಆಹಾರದಂತಹ ಸೂಕ್ಷ್ಮ ವಲಯದಲ್ಲಿ ಎದ್ದಿರುವ ಹೊಸ ಅಲೆಯ ಪ್ರಯೋಗವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಬಹುತೇಕ ಎಲ್ಲಾ ಕಂಪೆನಿಗಳೂ ಮುಂದಾಗಿವೆ.ಆದರೆ ಇಲ್ಲಿ ಗ್ರಾಹಕರ ವಿಶ್ವಾಸ ಗಳಿಸುವುದು ಅಷ್ಟು ಸುಲಭವಲ್ಲ. ಕೇವಲ ಮಾಲ್-ಸ್ಟೋರ್‌ಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡರಷ್ಟೇ ಸಾಲದು. ಭಾರತೀಯ ತಾಯಂದಿರ ಮನಸ್ಸುಗಳಲ್ಲೂ ಜಾಗ ಪಡೆಯಬೇಕು. ಪುಟ್ಟ ಕಂದಮ್ಮಗಳ ಬಾಯಿಗೂ ಹೊಂದಿಕೊಳ್ಳಬೇಕು. ಒಂದು ಬಾರಿ ಒಂದು ಸಣ್ಣ ತಪ್ಪು, ತೊಡರು, ಅಸಡ್ಡೆ ಅಥವಾ  ಸಣ್ಣ ಅವ್ಯವಸ್ಥೆ ಆದರೂ ಸಾಕು ಉತ್ಪಾದಕರ ಪತನ ಖಚಿತ.ಶಿಶು ಆಹಾರದಿಂದ ಮಗುವಿಗೆ ಸಣ್ಣ ಪ್ರಮಾಣದ ತೊಂದರೆ ಏನಾದರೂ ಆದರೆ ಆ ತಾಯಿ ಖಂಡಿತ ಆ ಉತ್ಪನ್ನದತ್ತ ಮತ್ತೊಮ್ಮೆ ಮನಸ್ಸು ಮಾಡುವುದಿಲ್ಲ. ಇದು ಒಬ್ಬ ತಾಯಿಯ ಲೆಕ್ಕಕ್ಕಷ್ಟೇ ಕೊನೆಗೊಳ್ಳುವ ಪ್ರಕ್ರಿಯೆ ಅಲ್ಲ. ಆಕೆ ಪರಿಚಿತ ತಾಯಂದಿರೆದುರು ನೋವು, ಬೇಸರ ಹಂಚಿಕೊಳ್ಳುತ್ತಾಳೆ, ಉತ್ಪನ್ನವನ್ನು ಖಂಡಿಸುತ್ತಾಳೆ. ಯಾವುದೇ ಬ್ರಾಂಡ್‌ನ ಪ್ರಭಾವವನ್ನು ಅಳಿಸಬೇಕು ಎನ್ನುವುದು ಅವಳ ಉದ್ದೇಶವಾಗಿರದೇ ಇದ್ದರೂ ತನ್ನ ಮಗು ಪಟ್ಟ ಪಾಡು ಮತ್ತೊಂದು ಮಗುವಿಗೆ ಆಗಬಾರದು ಎಂಬುದಷ್ಟೇ ಆಗಿರುತ್ತದೆ.ಒಮ್ಮೆ ಹೀಗೆ ವಿಶ್ವಾಸ ಕಳೆದುಕೊಳ್ಳುವ ಬ್ರಾಂಡ್ ಮಾರುಕಟ್ಟೆಯಲ್ಲಿ ಬಹುತೇಕ ನೆಲಕಚ್ಚಿದಂತೆಯೇ ಸರಿ. ಆದ್ದರಿಂದ ಶಿಶು ಆಹಾರ ತಯಾರಕರು ಎಲ್ಲ ಎಚ್ಚರಿಕೆಗಳೊಂದಿಗೆ ಕೆಲಸ ಮಾಡಬೇಕಿರುತ್ತದೆ.ಅದೇನೇ ಇರಲಿ, ಆಹಾರ ತಯಾರಿಕೆ ಮತ್ತು ಪೂರೈಕೆ ತಂತ್ರಜ್ಞಾನ ಬೆಳೆದಂತೆಲ್ಲ ಹೊಸ ಹೊಸ ಉತ್ಪನ್ನಗಳು ಬೆಳಕಿಗೆ ಬರುತ್ತಿವೆ. ಹೊಸ ರುಚಿ, ನವೀನ ಶೈಲಿಯ ಪ್ಯಾಕಿಂಗ್, ಉತ್ತಮ ಸ್ವಾಧದ ಗುಣಗಳನ್ನು ಒಳಗೊಳ್ಳುತ್ತಾ ಸಾಗಿರುವ ಶಿಶು ಉತ್ಪನ್ನಗಳು ಹೊಸ ಗ್ರಾಹಕರನ್ನು ತಮ್ಮತ್ತ ಎಳೆದುಕೊಳ್ಳಲು ಪ್ರಯತ್ನಿಸುತ್ತಲೇ ಇವೆ. ದಶಕದ ಹಿಂದೆ ಚಿಲ್ಲರೆ ವ್ಯಾಪಾರವಾಗಿದ್ದ ಈ ಉದ್ಯಮ ಇಂದು ಶತಪೋಟಿ ಡಾಲರ್ ವಹಿವಾಟು ನಡೆಸುವ ಬೃಹತ್ ಉದ್ಯಮವಾಗಿ ಬೆಳೆದಿದೆ.., ಬೆಳೆಯುತ್ತಲೇ ಇದೆ.ಇತ್ತ ಹೊರಗೆ ದುಡಿಯುವ ಭಾರತದ ತಾಯಂದಿರಿಗೆ ತಮ್ಮ ಮಕ್ಕಳಿಗೆ ಸುರಕ್ಷಿತವಾದ ಹಾಗೂ ಶುದ್ಧ ಆಹಾರವನ್ನು ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳಲು ಮುಖ್ಯವಾಗಿ ಸಮಯದ ಕೊರತೆ ಇದೆ(ಇಂಥ ಶಿಶು ಆಹಾರ ಸಿದ್ಧಪಡಿಸಿಟ್ಟುಕೊಳ್ಳಲು ಅನುಭವ, ಹಿರಿಯರ ಮಾರ್ಗದರ್ಶನ, ಸಂಯಮವೂ ಬೇಕು). ಹಾಗಾಗಿಯೇ ಇಂತಹ ಬ್ರಾಂಡೆಡ್ ಉತ್ಪನ್ನಗಳು ಅವರಿಗೆ ಅನಿವಾರ್ಯವೇ ಆಗಿವೆ. ಇದೆಲ್ಲದರ ಪರಿಣಾಮ ಮಕ್ಕಳ ಆಹಾರ ಮತ್ತು ಮಕ್ಕಳ ಆರೈಕೆ ಎಂಬ ವಿಶಿಷ್ಟ ಉದ್ಯಮದ ಒಟ್ಟಾರೆ ಪ್ರಗತಿಯ ದೊಡ್ಡಪಾಲು ಶಿಶು ಆಹಾರ ಉತ್ಪನ್ನ ವಿಭಾಗವೇ ನಿರ್ಧರಿಸುತ್ತಿದೆ. ಹಾಗಾಗಿಯೇ ಒಟ್ಟು ಉದ್ಯಮದ ಬೆಳವಣಿಗೆಯಲ್ಲಿ ಈ ಉತ್ಪನ್ನಗಳ ಪಾಲು ಮೂರನೇ ಒಂದು ಭಾಗದಷ್ಟಿದೆ.`ಗುಣಮಟ್ಟ ಖಚಿತಪಡಿಸಿ ಖರೀದಿಸಬೇಕು'

ಪುಟ್ಟ ಮಕ್ಕಳಿಗೆ ಆರಂಭದ ದಿನಗಳಲ್ಲಿ ಎಂತಹ ಆಹಾರ ನೀಡುತ್ತೇವೆ ಎನ್ನುವುದು ಅವರ ಇಂದಿನ ಮತ್ತು ಮುಂದಿನ ಆರೋಗ್ಯ ಹಾಗೂ ಜೀವನವನ್ನು ನಿರ್ಧರಿಸುತ್ತದೆ. ಆದ್ದರಿಂದ ಈ ವಿಷಯದಲ್ಲಿ ಪ್ರತಿ ತಾಯಿಯೂ ಶಿಸ್ತುಬದ್ಧ ಮತ್ತು ಸುರಕ್ಷಿತವಾದ ಕ್ರಮಗಳನ್ನೇ ಅನುಸರಿಸಲು ಬಯಸುತ್ತಾಳೆ.ಮನೆಯಲ್ಲಿ ಸ್ವಚ್ಛ ಕೈಗಳಿಂದ, ಪರಿಶುದ್ಧ, ತಾಜಾ ಹಾಗೂ ಆರೋಗ್ಯಪೂರ್ಣ ಸಾಮಗ್ರಿಗಳನ್ನೇ ಬಳಸಿ ಮಕ್ಕಳ ಆಹಾರ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಆದರೆ ಈಗ ದುಡಿಯುವ ತಾಯಂದಿರಿಗೆ ಇದಕ್ಕೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗಬಹುದು. ಆದ್ದರಿಂದ ಸಿದ್ಧ  ಶಿಶು ಆಹಾರವನ್ನೇ ಖರೀದಿಸಿ ತರುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅಂತಹ ಉತ್ಪನ್ನಗಳ ಗುಣಮಟ್ಟ ಮೊದಲು ಖಚಿತಪಡಿಸಿಕೊಂಡು ನಂತರವೇ ಬಳಸುವುದು ಉತ್ತಮ.ಅಲ್ಲದೇ, ಅವು ತಯಾರಾದ ದಿನ, ಕಾಯ್ದಿರಿಸಬಹುದಾದ ಅವಧಿ, ಬಳಸಿದ ಸಾಮಗ್ರಿಗಳ ವಿವರ ಮೊದಲಾದ ಅಂಶಗಳ ಬಗ್ಗೆ ಗಮನ ಹರಿಸಲೇಬೇಕು. ಜತೆಗೆ ಮಗುವಿನ ವಯಸ್ಸು ಹಾಗೂ ಸಾಮರ್ಥ್ಯವನ್ನು ಅರಿತು ಹಿರಿಯರ ಅಥವಾ ವೈದ್ಯರ ಸಲಹೆಯಂತೆ ಆಹಾರ ನೀಡಬೇಕು. ಇದರಲ್ಲಿ ಸ್ವಂತ ಬುದ್ಧಿವಂತಿಕೆಯ ಪ್ರದರ್ಶನ ಬೇಡ. ನಿಮ್ಮ ಮಗುವಿಗೆ ಯಾವ ರೀತಿಯ, ಯಾವ ಉತ್ಪನ್ನದ ಆಹಾರ ರುಚಿ ನೀಡುತ್ತದೆಯೊ, ಅದಕ್ಕೆ ಹಿತ ಎನಿಸುತ್ತದೆಯೊ ಅದನ್ನೇ ನೀಡಿ. ಇತರರು ಅವರ ಮಕ್ಕಳಿಗೆ ನೀಡುವ ಆಹಾರವನ್ನೇ ನಿಮ್ಮ ಮಗುವಿಗೂ ನೀಡಬೇಕು ಎನ್ನುವ ತರ್ಕ ಅನಗತ್ಯ.

ಡಾ. ವಸುಂಧರಾ ಭೂಪತಿ`ವಿದೇಶ ಉತ್ಪನ್ನ'ದತ್ತ ಒಲವು

ಭಾರತದ ಮಕ್ಕಳ ಆಹಾರ ಮತ್ತು ಪೋಷಣೆ ಉತ್ಪನ್ನಗಳ ಕ್ಷೇತ್ರದ ಉದ್ಯಮಕ್ಕೆ ಜಾಗತಿಕ ಕಂಪೆನಿಗಳೂ ಕಾಲಿಟ್ಟಿವೆ. ಇದರಿಂದ ಭಾರತೀಯ ಕಂಪೆನಿಗಳಲ್ಲಿ ಅಭದ್ರತೆಯ ಅಳಕು ಆರಂಭವಾಯಿತು. ಇಟಲಿ ಮೂಲದ ಇಜ್ಚ್ಚಿಟ ಎಂಬ ಶಿಶು ಆಹಾರ ಬ್ರಾಂಡ್ ಭಾರತಕ್ಕೆ ಕಾಲಿಟ್ಟಾಗ ಉಂಟಾದ ತಲ್ಲಣ ಭಾರತದ ಮಕ್ಕಳ ಆಹಾರೋದ್ಯಮದಲ್ಲಿ ಸಂಚಲನವನ್ನೇ ಮೂಡಿಸಿತು.2010ರಲ್ಲಿ ಈ ಕಂಪೆನಿ ಭಾರತದಲ್ಲಿ ತನ್ನ ಘಟಕ ಆರಂಭಿಸಲು ಮುಂದಾದಾಗ ಅದು ್ಙ6 ಕೋಟಿಯನ್ನು ಒಂದು ವರ್ಷದಲ್ಲಿ ಬ್ರಾಂಡ್ ಬಿಲ್ಡಿಂಗ್ ಚಟುವಟಿಕೆಗಾಗಿಯೇ ವಿನಿಯೋಜಿಸಿತು. ಅದಕ್ಕೂ ಮುನ್ನ ಕಂಪೆನಿ ಮಾರುಕಟ್ಟೆ ಸಂಶೋಧನೆ ಮತ್ತು ಜೀವನಶೈಲಿಯ ಪ್ರಮುಖ ಅಂಶಗಳನ್ನು ಅರಿಯಲು ಯತ್ನಿಸಿತ್ತು.ಭಾರತೀಯ ಮನಸ್ಸುಗಳು ವಿದೇಶಿ ಉತ್ಪನ್ನಗಳಿಗೆ ಬಹಳ ಬೇಗ ಮಾರುಹೋಗುತ್ತವೆ ಎಂಬ ನಂಬಿಕೆಯೂ ಇರುವುದರಿಂದ ವಿದೇಶಿ  ಕಂಪೆನಿಗಳ ಉತ್ಪನ್ನಗಳೊಂದಿಗೆ ಪೈಪೋಟಿಗೆ ನಿಲ್ಲಲು ಭಾರತೀಯ ಕಂಪೆನಿಗಳು ಚಿಂತೆಗೀಡಾದವು. ಉನ್ನತ ಗುಣಮಟ್ಟವನ್ನು ಸಾಧಿಸುವ ಜತೆಗೆ ಬೆಲೆಯಲ್ಲಿ ರಾಜಿಯಾಗಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಯಿತು.ಅದೇನೇ ಇರಲಿ, `ವಿದೇಶ ಉತ್ಪನ್ನ'ದತ್ತ ಒಲವು ಹೆಚ್ಚಿದ್ದರೂ ತಮ್ಮ ಮಕ್ಕಳ ಆಹಾರ/ಆರೋಗ್ಯದ ವಿಚಾರ ಬಂದಾಗ ಭಾರತೀಯ ತಾಯಂದಿರು ತಾಜಾ, ನೈಸರ್ಗಿಕ ಹಾಗೂ ಆರೋಗ್ಯಪೂರ್ಣ ಉತ್ಪನ್ನಗಳನ್ನೇ ಆಯ್ದುಕೊಳ್ಳುತ್ತಾರೆ ಎಂಬುದನ್ನು ಮಾತ್ರ ಕಡೆಗಣಿಸುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry